Category: Kannada 

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.||

ಕೆಂದಾವರೆಯಂತೆ ಪಾದಂಗಳು ರಂಗ
ಚಂದದಿ ಧಿಮಿಧಿಮಿ ಕುಣಿಯುತಲಿ
ಅಂದುಗೆ ಗೆಜ್ಜೆಯಿಂ ನಲಿಯುತ ಬಾರೋ
ಅರವಿಂದ ನಯನ ಗೋವಿಂದ ನೀ ಬಾರೋ ||೧||

ಕೋಟಿ ಸೂರ್ಯ ಪ್ರಭಾ ಕಾಂತಿಗಳಿಂದ
ಕಿರೀಟ ಕುಂಡಲ ಬಾವುಲಿ ಹೊಳೆಯೆ
ಲಲಾಟ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೋ ಈಗ ||೨||

ಮಂಗಳಾತ್ಮಕ ಮೋಹನಕಾಯನೆ
ಸಂಗೀತಲೋಲ ಸದ್ಗುಣಶೀಲ
ಅಂಗನೆ ಲಕುಮಿ ಸಹಿತವಾಗಿ ಬಂದೆನ್ನ
ಅಂಗಳದೊಳಗಾಡೊ ಪುರಂದರ ವಿಠಲ ||೩||

ODi bArayya vaikuMThapati ninna nODuve manadaNiya
nODi muddADi mAtADi saMtOShadi
pADi pogaLuvenu parama puruSha hari ||pa.||

keMdAvareyaMte pAdaMgaLu raMga
chaMdadi dhimidhimi kuNiyutali
aMduge gejjeyiM naliyuta bArO
araviMda nayana gOviMda nI bArO ||1||

kOTi sUrya prabhA kAMtigaLiMda
kirITa kuMDala bAvuli hoLeye
lalATa kastUri tilakaviDuve raMga
kUTa gOpAlara ATa sAkO Iga ||2||

maMgaLAtmaka mOhanakAyane
saMgItalOla sadguNashIla
aMgane lakumi sahitavAgi baMdenna
aMgaLadoLagADo puraMdara viThala ||3||

Category: Folklore
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಬಾನಿನಲ್ಲಿ ಮೋಡವೂ ಕವಿದಿರಲೂ
ಕಾಣದಿರಲೂ ಚಂದಿರ ಸುತ್ತಲೂ ಎಲ್ಲೂ
ಆವರಿಸಿದೆ ಸುತ್ತಲೂ ಕರಿ ನೆರಳು, ಛಾಯೆ…
ಬಲ್ಲವರು ಯಾರು ಈ ಮಾಯೆ..!?

ಮರು ಬರುವನೇ ಚಂದಿರ ಬಾನಿನಲ್ಲಿ!
ಪ್ರಶ್ನಿಸಲೀ ನಾನು ಯಾರ,ಯಾರಲ್ಲೀ ?
ಬಿಡಿಸುವವರಾರೂ ಈ ಒಗಟ…!!

ಹ್ಹ.. ಹ್ಹ.. ಹ್ಹ..! ನೆನಪಾಯಿತು ಗಾದೆ,
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.
ಬದುಕೆಂಬ ಈ ನಾಲ್ಕು ದಿನಗಳ ಮಾಯದಾಟ,
ಕಲಿವರಿಲ್ಲಿ ಎಲ್ಲರೂ ಜೀವನಪಾಠ.
ಸುಖ- ದುಃಖಗಳ ಸಮ್ಮಿಲನ,
ನೋವು- ನಲಿವಿನ ಕೂಟ..

ಅರೆ ರೇ..!? ಕಾಲವು ಸರಿಯಿತು ,
ಮೋಡವೂ ಕರಗಿತು,
ಬೆಳಕು ಹರಿಯಿತು ನೀ.. ಕೇಳಿಲ್ಲಿ…
ಚಂದಿರನಿಲ್ಲದಿರೆನಂತೆ,
ಮೂಡಣದಿ ಬಂದಿಹ ನೇಸರ ನೋಡಲ್ಲಿ.. ನೀ.. ನೋಡಲ್ಲಿ…!!!
— ಶ್ರೀಧರ ಗಿಂಡೆ

Shri.Ginde

Photo By:
Submitted by: Shri.Ginde
Submitted on: Tue May 17 2016 14:40:45 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕಣ್ಣಿಗೆ ಕಲ್ಪನೆ ಮನಸಿಗೆ ಭಾವನೆ

Muthyalanna

Photo By:
Submitted by: Muthyalanna
Submitted on: Thu Dec 03 2015 13:22:45 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕವಿಯಾಗಲೆಂದು ಬರೆಯಲಿಲ್ಲ ನಾ ಕವನಗಳನ್ನ
ನಿನ್ನ ಮರೆಯಲೆಂದೇ ಗೀಚಿದೆ ಈ ಅಕ್ಷರಗಳನ್ನ
ಪ್ರಯತ್ನಿಸುತ್ತಿರುವೆ ಮರೆಯಲು ನಿನ್ನ ನೆನಪುಗಳನ್ನ
ಆದರೇನು ಮಾಡಲಿ…ಈ ಅಕ್ಷರಗಳಿಗೆ
ಸ್ಫೂರ್ತಿ ನೀನೇ ಅಲ್ಲವೇ ಗೆಳೆಯಾ?
ಮನದಲ್ಲೇ ಪ್ರೀತಿಸಿದೆ ಅಂದಿನಿಂದ…
ಹೇಳಲಾರದ ಪುಟ್ಟದೊಂದು ಹೆದರಿಕೆಯಿಂದ
ಹೇಳು, ನಿನಗೆಂದೂ ಅರ್ಥವಾಗಲಿಲ್ಲವೇ
ಈ ನನ್ನ ಮನದ ಒಲವು ?
ತುಂಬಾ ದೂರವಾಗಿರುವೆ ಇಂದು ನೀ ನನ್ನಿಂದ
ಅದಕ್ಕಿಂದು ಈ ಕವನ ಬಂದಿದೆ ನನ್ನೀ ಮನದಿಂದ
Bhuvi

Photo By:
Submitted by: Bhuvi
Submitted on: Thu Sep 17 2015 14:19:48 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕನಸಿನ ಕೋಟೆಯೊಳಗೆ ಬಂಧಿಯಾಗಿರುವೆ
ಓ ಗೆಳೆಯಾ …
ಮರೀಚಿಕೆಯೆಂಬ ಕುದುರೆಯೇರಿ ಹೊರಟಿರುವೆ
ಕವಲುದಾರಿಯಲಿ…
ನಿನ್ನ ಸೇರಬೇಕೆಂಬ ತವಕದಲಿ …
ಕಾಗದದ ದೋಣಿಯಾದರೂ ಸಿಗಲಿ
ಮಣ್ಣಿನ ಬೊಂಬೆಯಾದರೂ ಸಿಗಲಿ
ನಂಬಿಕೆಯನ್ನಿರಿಸಿಕೊಂಡು
ಬದುಕುತ್ತಿರುವೆ ನನ್ನೀ ಬದುಕಲಿ

Bhuvi

Photo By:
Submitted by: Bhuvi
Submitted on: Thu Sep 17 2015 14:05:25 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕೆಲವು ಪುಸ್ತಕಗಳು ನಿದ್ದೆ ಮಾತ್ರೆಯಂತೆ..

Photo By: –
Submitted by: Janaki
Submitted on: Thu Jul 09 2015 10:02:37 GMT+0530 (IST)
Category: Other
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಯಾವ ಭಾಷೆಯ ಹೀರಿಕೆಯೂ ಸರಿಯಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ – ಹಾ ಮಾ ನಾಯಕ

Photo By: –
Submitted by: Sahana Harekrsihna
Submitted on: Fri Jun 19 2015 15:04:20 GMT+0530 (IST)
Category: Non-Original work with acknowledgements
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕನಸು -vinaya gowda

ಕನಸಿಲ್ಲದ ಮನಸಿನಲ್ಲಿ ಕನಸಾಗಿ ಬಂದೆ ನೀನು
ನಿನ್ನಂದ ಚಂದವ ಹೊಗಳಲು ನಾಚುತ್ತಿರುವೆ ನೀನು
ಕೈ ಸೋಕಿಸಲು ದೂರ ಸರಿಯುತ್ತಿರುವೆ ನೀನು
ಕಣ್ಮುಚ್ಚಿ ಚುಂಬಿಸಲು ಕಣ್ಮರೆಯಾದೆಯಲ್ಲ ನೀನು
ಅರಳಿ ಉದುರುವ ಹೂವಾದೆಯ ನೀನು
ನಿನ್ನ ಸವಿ ಕನಸಿಗೆ ಕಾಯುತ್ತಿರುವೆ ನಾನು ….
ಇಂತಿ ನಿನ್ನ ಪ್ರೀತಿಯ
-ವಿನಯ
vinaya gowda

Photo By:
Submitted by: vinaya gowda
Submitted on: Thu Feb 12 2015 16:52:50 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

FullMoonLarge.jpg
ನಾನು ನಾನಲ್ಲ..
ನಾನು ಬಾನಲ್ಲಿ ನಗುವ ಚಂದಿರನ
ಸೊಗಸಾದ ಪದಗಳಲ್ಲಿ ಸೆರೆಹಿಡಿವ ಕವಿ…
ನಾನು ನಾನಲ್ಲ,
ನಾನು ಇಳೆಯ ಹಸಿರು ಕಾನನವನ್ನು
ಹಸನು ಮಾಡುವ ಸೂರ್ಯ ಕಿರಣಗಳನ್ನು
ಕುಂಚದಲ್ಲಿ ಹಿಡಿದಿಡುವ ಚಿತ್ರಗಾರ …
ನಾನು ನಾನೇನಲ್ಲ,
ನಾನು ನಿಸರ್ಗದ ಸವಿಯನ್ನು
ಕಣ್ಣಂಚಿನಲ್ಲಿ ಸೆರೆಹಿಡಿವ ನಾನೇ,
ಕಲಾವಿದ. . . .
priyanka_rosenknospe

Photo By: Priyanka
Submitted by: priyanka_rosenknospe
Submitted on: Tue Jan 13 2015 19:46:03 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಆ ದಿನಾ ಜಾತ್ರೆಯಲ್ಲಿ ,
ಜನಜಂಗುಳಿಯ ಪಕ್ಕದಲ್ಲಿ ,
ಭಿಕ್ಷುಕರು, ಮುಗ್ಧ ಮಕ್ಕಳೊಂದಿಗೆ
ಭಿಕ್ಷೆ ಹಾಕಾಬೇಕಂದಿದ್ದೆ ಅಂತರಂಗದೊಂದಿಗೆ
ಯಾಕೋ ಬಹಿರಂಗ ಸ್ವಾರ್ಥವಾಯಿತು,
ಹಣ ಇದ್ದರೂ ! ನಾ ಸ್ವಾರ್ಥಿಯದೇ !
ಓ ದೇವರೇ ನನಗೇಕೆ ಈ ಶಿಕ್ಷೆ ?

Photo By:
Submitted by: NMNK
Submitted on: Thu Jan 15 2015 17:11:57 GMT+0530 (IST)
Category: Original Chutuku
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

%d bloggers like this: