Category Archives: Kannada

ಇಂಗ್ಲೀಷ್ ಹುಚ್ಚು: -Shilpa V

ಇಂಗ್ಲೀಷ್
ವ್ಯಾಮೋಹಕ್ಕೆ ಸಿಕ್ಕ ನಾನು
ಕನ್ನಡವನು ತೊರೆದೆ,
ಹಗಲಿರುಳೂ
ಇoಗ್ಲೀಷ್ – ಇoಗ್ಲೀಷ್
ಎoದು ಕನವರಿಸಿದೆ.
ಆ ಪುಸ್ತಕ ಈ ಪುಸ್ತಕ
ಎನುತ ಇಂಗ್ಲೀಷನೆ ಜಾಲಾಡಿದೆ,
ಆದರೂ,
ಕನ್ನಡದಂಥ ಸುಗಂಧವನು
ಇಂಗ್ಲೀಷ್ ನಲ್ಲಿ ಕಾಣದಾದೆ.
ಹೀಗೆ ಮೈಮರೆತಿದ್ದ ನಾನು
ಇಂಗ್ಲೀಷ್ ಗುಂಗಿನಿಂದ ಹೊರಬಂದೆ,
ಮತ್ತೆ ಕನ್ನಡದ ಮಡಿಲಿಗೆ ಶರಣಾದೆ!!
-Shilpa V

Photo By: –
Submitted by: Shilpa V
Submitted on: Wed Sep 02 2020 04:14:33 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
– You could also send your submissions to editor@abillionstories.com

ಕನ್ನಡ ಗಾದೆಗಳು – ೧ -It does not matter

೦. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು

ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.

೧೦೨. ದುಡಿಮೆಯೇ ದುಡ್ಡಿನ ತಾಯಿ.

೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.

೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.

೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?

೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.

೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

೧೧೧. ಹೊರಗೆ ಥಳಕು ಒಳಗೆ ಹುಳಕು.

೧೧೨. ಸ೦ಕಟ ಬ೦ದಾಗ ವೆ೦ಕಟರಮಣ.

೧೧೩. ಯಥಾ ರಾಜ ತಥಾ ಪ್ರಜಾ.

೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.

೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.

೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.

೧೧೯. ಬಡವನ ಕೋಪ ದವಡೆಗೆ ಮೂಲ.

೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,

ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.

೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.

೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.

೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.

೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.

೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.

೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು

ಸ೦ಬ೦ಧ ಅ೦ದ ಹಾಗೆ.

೧೩೨. ನಾರಿ ಮುನಿದರೆ ಮಾರಿ.

೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.

೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.

೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.

೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.

೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.

೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.

೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.

೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.

೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.

೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.

೧೪೫. ಬಾಯಿ ಬಿಟ್ಟರೆ ಬಣ್ಣಗೇಡು.

೧೪೬. ಸ೦ಕಟ ಬ೦ದಾಗ ವೆ೦ಕಟರಮಣ.

೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.

೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.

೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.

೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.

೧೫೩. ಮೀಸೆ ಬ೦ದವನು ದೇಶ ಕಾಣ.

೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.

೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.

೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.

೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.

೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.

೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?

೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.

೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?

೧೬೫. ಕಾಸಿದ್ದರೆ ಕೈಲಾಸ.

೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.

೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.

೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.

೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.

೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

೧೭೨. ಹೂವಿನ ಜೊತೆ ದಾರ ಮುಡಿಯೇರಿತು.

೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.

೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.

೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.

೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.

೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.

೧೭೯. ಅತ್ತ ದರಿ, ಇತ್ತ ಪುಲಿ.

೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

೧೮೧. ಆಪತ್ತಿಗಾದವನೇ ನೆ೦ಟ.

೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.

೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

೧೮೪. ಎಲ್ಲಾ ಜಾಣ, ತುಸು ಕೋಣ.

೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.

೧೮೬. ಮೂಗಿಗಿ೦ತ ಮೂಗುತ್ತಿ ಭಾರ.

೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.

೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.

೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.

೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.

೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.

೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?

೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.

೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.

೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.

೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.

೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.

೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.

೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.

೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.

೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.

೨೦೬. ಮಹಾಜನಗಳು ಹೋದದ್ದೇ ದಾರಿ.

೨೦೭. ಅರವತ್ತಕ್ಕೆ ಅರಳು ಮರಳು.

೨೦೮. ಜನ ಮರುಳೋ ಜಾತ್ರೆ ಮರುಳೋ.

೨೦೯. ಕು೦ಟನಿಗೆ ಎ೦ಟು ಚೇಶ್ಟೆ.

೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.

೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

೨೧೩. ಕೈಗೆಟುಕದ ದ್ರಾಕ್ಷಿ ಹುಳಿ.

೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.

೨೧೫. ದುಷ್ಟರ ಕ೦ಡರೆ ದೂರ ಇರು.

೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.

೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.

೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.

೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.

೨೨೫. ರವಿ ಕಾಣದ್ದನ್ನು ಕವಿ ಕ೦ಡ.

೨೨೬. ಕೆಟ್ಟು ಪಟ್ಟಣ ಸೇರು.

೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.

೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.

೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?

೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.

೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.

೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.

೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.

೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.

೨೩೯. ತಾನೂ ತಿನ್ನ, ಪರರಿಗೂ ಕೊಡ.

೨೪೦. ಗ೦ಡಸಿಗೇಕೆ ಗೌರಿ ದುಃಖ ?

೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.

೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.

೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.

೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.

೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.

೨೪೬. ಅತಿ ಆಸೆ ಗತಿ ಕೇಡು.

೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.

೨೪೮. ಅತಿಯಾದರೆ ಆಮೃತವೂ ವಿಷವೇ.

೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.

೨೫೦. ಆತುರಗಾರನಿಗೆ ಬುದ್ಧಿ ಮಟ್ಟ.

೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.

೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.

೨೫೪. ಉ೦ಡೂ ಹೋದ, ಕೊ೦ಡೂ ಹೋದ.

೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.

೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.

೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.

೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.

೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.

೨೬೧. ಲ೦ಘನ೦ ಪರಮೌಶಧ೦.

೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ

೨೬೩. ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ.

Photo By: –
Submitted by: It does not matter
Submitted on: Mon Mar 11 2019 06:18:07 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit
– You could also send your submissions to editor@abillionstories.com

ಪಿಸುಮಾತು -Aa.Ja.Ka

ಮನಸಿಗೇಕೆ ತಾಕಿತು ನಿನ್ನ ಮೌನದ ಮಾತಿನ ಅರ್ಥ ?
ಮನದಿಯಲ್ಲೇಕೆ ಉಳಿಯಿತು ನೀನೇ ಬೇಕೆಂಬ ಸ್ವಾರ್ಥ ?
ಶಾಶ್ವತವಾಗಿ ನಿನ್ನನ್ನು ಮನದ ಮರೆಗೆ ನೂಕುವಾಗ ನೀ ಏಕೆ ಜಿಗಿದೆ ಮನದ ಮೋಡಕ್ಕೆ
ನನ್ನನ್ನು ನನ್ನಿಂದಲೇ ಎಳೆದು ಏಕೆ ನೂಕಿದೆ ಪ್ರೀತಿಯ ಮಾರ್ಗಕ್ಕೆ ?

Photo By:
Submitted by: Aa.Ja.Ka
Submitted on: Thu Apr 19 2018 23:23:24 GMT+0530 (IST)
Category: Semi-Fiction-A real life incident mixed with imagination Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಹಿರೇ ಅಕ್ಕನ… -Sakala

1. ಪಾಲಿಗೆ ಬಂದದ್ದು ಪಂಚಾಮೃತ
In English Script: Pālige bandaddu pan̄cāmr̥ta
Literal Translation: What comes to your tongue is an elixir.
English meaning of Kannada Proverb: Accept with faith what comes to you.

2. ಹಿರೇ ಅಕ್ಕನ ಚಾಳಿ ಮನೆ ಮಂದಿಗೆಲ್ಲ
In English Script: Hirē akkana cāḷi mane mandigella
Literal translation: Elder sister’s habits are reflected in the rest of the household.
English meaning of Kannada Proverb: The young inherit their qualities from the elders.
Nearest English Equivalent Proverb: Like father, like son.

3. ಮನಸ್ಸಿದ್ದರೆ ಮಾರ್ಗ
In English Script: Manas’siddare mārga
Nearest English Equivalent Proverb: Where there is a will, there is a way.

4. ಅತ್ತೆಗೊ೦ದು ಕಾಲ ಸೊಸೆಗೊಂಡು ಕಾಲ
In English Script: Attego0du kāla sosegoṇḍu kāla
Literal Translation: Mother-in-law has a time, Daughter-in-law has a time.
English meaning of Kannada Proverb: Everyone gets a chance, in-time.

Photo By:
Submitted by: Sakala
Submitted on: Tue Dec 12 2017 06:37:21 GMT+0530 (IST)
Category: Folklore
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕಾಣ್ಮೆ – Vision -Shilpa Manjunath

ಕನಸು ಕಾಣುವುದು ಎಲ್ಲರಿಗೂ ಇಷ್ಟ .
ಆದರೆ ನನಸಾಗಲು , ಪಡಬೇಕು ಸ್ವಲ್ಪ ಕಷ್ಟ .
ಇದ್ದರೆ ನಿನ್ನಲ್ಲಿ ವಿಚಾರಗಳು ಸ್ಪಷ್ಟ ,
ಆಗದು ನಿನ್ನ ಶ್ರಮ ಎoದಿಗೂ ನಷ್ಟ .

ಒದಗಿ ಬರಬೇಕೆಂದರೆ ನಿನಗೆ ಅದೃಷ್ಟ ,
ತ್ಯಜಿಸು ಎಲ್ಲ ದುಶ್ಚಟ , ಮಾಡು ಕೆಲಸ ವಿಶಿಷ್ಟ ,
ಪಡಿಸು ಹಿರಿಯರನು ಸಂತುಷ್ಟ .
ನೆರವಾಗು ಜನರಿಗೆ ತೊರೆಯಲು ಸಂಕಷ್ಟ .

ಚಂಚಲ ಮನಸನು ಚೂಟಿ ಹಾಕಿ
ಉಹಾಪೋಹಗಳಿಗೆ ಕಿವಿಗೊಡದೆ
ನಿರರ್ಗಳವಾಗಿ ನಿರ್ಭಯದಿಂದ ಮುನ್ನುಗ್ಗು,
ನಿನ್ನ ನಡೆನುಡಿಯಲ್ಲಿದ್ದರೆ ಶಿಷ್ಟ ,
ಈ ಜಗದಲಿ ನೀನಾಗುವೆ ಉತ್ಕೃಷ್ಟ ..

ಹೌದು , ಕನಸು ಕಾಣುವುದು ಎಲ್ಲರಿಗೂ ಇಷ್ಟ .
ನನಸಾಗಬೇಕೆಂದರೆ ಸ್ವಲ್ಪ ಕಷ್ಟ . . ಸ್ವಲ್ಪ ಕಷ್ಟ . .
-Shilpa Manjunath

Photo By:
Submitted by: Shilpa Manjunath
Submitted on: Mon Jun 19 2017 03:27:38 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಅವಳ ಹಾಡು -Daya Bhat

ಭುಜಕ್ಕೆ ಕಿಟಕಿಯ ಆಸರೆ. ಮನದ ತುಮುಲಕ್ಕೆ ಪದಗಳ ಆಸರೆ
ಎಂದೋ ಪ್ರಾರಂಭವಾದ ಹಾಡಿಗೆ ಪಲ್ಲವಿಯ ಆಸರೆ
ಎಂದೋ ಮುಗಿಯುವ ಹಾಡಿಗೆ ಕಾಲನ ಆಸರೆ
ಕ್ಷಣಿಕ ಸ್ವಾತಂತ್ರ್ಯಕ್ಕೆ ಸ್ವರಗಳ ಆಸರೆ.

ಸೂರೆ ಹೋದ ಪಟ್ಟಣದ ದಂತಕಥೆಯಂತೆ
ಹಿಡಿಯಷ್ಟು ಜೀವ… ಮುಡಿದಷ್ಟು ನಲಿವು
ಮೃದಂಗದ ತಕಧಿಮಿಯಲ್ಲಿ ನಿನ್ನ ಉಸಿರಿನ ನೆರಳು
ಕಂಡೂ ಕಾಣದಂತೆ ತಾಳ ತಪ್ಪುವ ಬೆರಳುಗಳು .

ಯಾಕೆ ಬರಲಿಲ್ಲ ಮತ್ತೆ ಆ ದಿನ ಎಂಬ ಆಕ್ಷೇಪ
ಥಟ್ಟನೆ ಎದ್ದ ಸಣ್ಣ ಅಪಸ್ವರಕೆ ನವಿರಾದ ಎಚ್ಚರಿಕೆ
ಧ್ವನಿಯ ಕಂಪನ ಇಂದಿಗೂ ಗುಪ್ತಗಾಮಿನಿ
ಅಲ್ಲಿರಲಿ ಅದು ರಾಗಕ್ಕೆ ನಿಲುಕದ ಭಾವವಾಗಿ.

ಕನಸಿನಂತೆ ಕಳೆದು ಹೋದ ಆ ಮುಸ್ಸಂಜೆಯ ಛಾಯೆ
ಮರುಭೂಮಿಯಲ್ಲಿ ಚಿಗುರಿದ ಜೀವಸೆಲೆ
ಇನ್ನೆಲ್ಲಿ ಅಲೆಮಾರಿ ಬದುಕು ಸಾಕು ಬಿಡು ಹುಡುಕಾಟ
ಅತ್ತಿತ್ತ ಪರದಾಡದಿರು ನೀನಿರುವಲ್ಲೇ ಸುಮುಧುರ ಗಾನ.

ನೀರಲ್ಲಿ ಮೀನಿನ ಹೆಜ್ಜೆ ಕಂಡವರುಂಟೇ
ಕಾಡು ವನದಲ್ಲಿ ಜೋಗಿಯ ಜಾಡು ಹಿಡಿದವರುಂಟೇ
ನಿನ್ನೆಯ ಹಾಡುಗಳು ಕನ್ನಡಿಯೊಳಗಿನ ಗಂಟು
ಅಳಿಸಿ ಹೋದ ಪದಗಳು… ಹಾಳು ಮರೆವು.

-Daya Bhat

Photo By:
Submitted by: Daya Bhat
Submitted on: Tue May 02 2017 13:53:02 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಏನು ಕತೆಯೋ -Daya Bhat

ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು
ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು.

ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು
ಒಂದರಂತೆ ಇನ್ನೊಂದು… ಮತ್ತೊಂದು … ಕಾಲ ಬಳಿ ಋತುಗಳ ರಾಶಿ.

ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು ಬೂದಿಯಾಗುತ್ತ
ಒಳಗೆ ಕಾಮಾಲೆ ಕಣ್ಣೊರೆಸುತ್ತ… ನಿಂತ ನೀರು ನಿಂತಲ್ಲಿಯೇ .

ಕೈಗಳು ತೂಗುತಿವೆ ಬರಿದಾದ ತೊಟ್ಟಿಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು.
ಮನಸು ಮರ್ಕಟ … ಅಂತರಂಗ- ಸಂತೆ ಪೇಟೆಯ ಗೋಜಲು.

ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ.
ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .

ಅರ್ಧ ಬೆಳಗುವ ಚಂದ್ರ … ಅರ್ಧ ಮಿಣುಕುವ ತಾರೆ
ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .

-Daya Bhat

Photo By:
Submitted by: Daya Bhat
Submitted on: Tue May 02 2017 09:48:53 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಯುಗಾದಿ.! -Shri.Ginde

ಬಾಳಿನ ಸಿಹಿ-ಕಹಿ ಒ೦ದಾಗಿ ಸವಿಯಲು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಚೆಲ್ಲಲೀ ನಮ್ಮ ಬಾಳಲಿ ಹೊಸ ಬೆಳಕನು
ಬೇವು-ಬೆಲ್ಲದ ಮಿಶ್ರಣವು, ತು೦ಬಲಿ ಬಾಳಲಿ ಹೊಸರುಚಿಯನು
ತಿ೦ದು ನಲಿಯುವಾ ಸ೦ತಸದಲಿ; ಮರೆಯುವಾ ಮತ್ಸರ ನಿಮಿಷದಲಿ
ಸೌರಮಾನವಿರಲಿ, ಚ೦ದ್ರಮಾನವಿರಲಿ; ಪವೋ೯ಲ್ಲಾಸ ಹರಡಿದೆ ಎಲ್ಲೆಡೆ
ಕೈ-ಬಿಸಿ ಹೊಸ ಸ೦ವತ್ಸರ ಕರೆದಿದೆ ತನ್ನೆಡೆ.

ಯುಗಾದಿ ಋತುಗಳ ವೈಭವವು
ವಷ೯ಕ್ಕೊ೦ದು ಹೊಸತು ಜಗದ ಜನನವು
ಮರೆಸಲು ದುಃಖ – ದುಮ್ಮಾನಗಳನು
ತೊಳೆದಿದೆ ಒಳಮನಸಿನ ಕೊಳಕನು

ಬೆರೆಯಲಿ ಕಹಿ ನೆನಪುಗಳು, ಸಿಹಿ ಸ೦ತೋಷದಲಿ
ಬೆರೆಯಲಿ ಮನಸುಗಳು, ಋತುಗಳ ಸಮ್ಮಿಲನದಲಿ
ಕರುಣಿಸಲಿ ಬಾಳಲಿ ಸುಖ: -ಶಾ೦ತಿಯನು
ಯುಗಾದಿ, ಚೈತ್ರಮಾಸದ ಗಾನವು
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ ಈ ಯುಗಾದಿ, ಹೊಸ ವಷ೯ವು

ಹೊಸವಷ೯ದ ಆದಿ ಆರ೦ಭಿಸುವಾ ಹಷ೯ದಿ
ಹಳೆಯದೆಲ್ಲ ಕೂಡಿ- ಕೂಡಿ ಹೊಸ ಅನುಭವ
ಚಿಗುರುತಿರಲು ನವ ಚೈತನ್ಯ, ಉಲ್ಲಾಸ ಹಷ೯ವು,
ನವೋದಯ, ಹೊಸ ವಷ೯ವು “ಯುಗಾದಿ”
ಯುಗಾದಿ.!

-Shri.Ginde

Photo By:
Submitted by: Shri.Ginde
Submitted on: Fri Apr 14 2017 15:09:44 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಗುಂಡಾಣಿ ಗುಂಡಾ -बे. हरेकृष्ण आचार्य

ಗುಂಡಾಣಿ ಗುಂಡಾ ,
ಮದುವೆ ಮಾಡ್ಕೊಂಡ ಹೊರ್ಟ ,
ಗಂಡಾ ಅತ್ತು ಬಿಟ್ಟಾ ,
ಗುಂಡಾ ನಕ್ಕು ಬಿಟ್ಟಾ ,
ಅತ್ತೆ ಕೋಲು ತಂದ್ರು ,
ಕೈ ಕಟ್ ,
ಬಾಯ್ ಮುಚ್ ।

Editor’s Note: The above poem is a play on the popular children’s poem in Kannada below.
ಉಂಡಾಡಿ ಗುಂಡಾ ,
ಮದುವೆ ಮನೆಗೆ ಹೋದ ,
ಹತ್ತು ಲಾಡು ತಿಂದಾ ,
ಇನ್ನು ಬೇಕು ಅಂದಾ ,
ಅಮ್ಮ ಬೆಣ್ಣೆ ಕೊಟ್ಟರು ,
ಅಪ್ಪ ದೊಣ್ಣೆ ತಂದ್ರು ,
ಕೈ ಕಟ್ ,
ಬಾಯ್ ಮುಚ್ ।
-बे. हरेकृष्ण आचार्य

Photo By:
Submitted by: बे. हरेकृष्ण आचार्य
Submitted on: Fri Sep 09 2016 00:00:00 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಓಡಿ ಬಾರಯ್ಯ -Sree Purandara Dasaru

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.||

ಕೆಂದಾವರೆಯಂತೆ ಪಾದಂಗಳು ರಂಗ
ಚಂದದಿ ಧಿಮಿಧಿಮಿ ಕುಣಿಯುತಲಿ
ಅಂದುಗೆ ಗೆಜ್ಜೆಯಿಂ ನಲಿಯುತ ಬಾರೋ
ಅರವಿಂದ ನಯನ ಗೋವಿಂದ ನೀ ಬಾರೋ ||೧||

ಕೋಟಿ ಸೂರ್ಯ ಪ್ರಭಾ ಕಾಂತಿಗಳಿಂದ
ಕಿರೀಟ ಕುಂಡಲ ಬಾವುಲಿ ಹೊಳೆಯೆ
ಲಲಾಟ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೋ ಈಗ ||೨||

ಮಂಗಳಾತ್ಮಕ ಮೋಹನಕಾಯನೆ
ಸಂಗೀತಲೋಲ ಸದ್ಗುಣಶೀಲ
ಅಂಗನೆ ಲಕುಮಿ ಸಹಿತವಾಗಿ ಬಂದೆನ್ನ
ಅಂಗಳದೊಳಗಾಡೊ ಪುರಂದರ ವಿಠಲ ||೩||

ODi bArayya vaikuMThapati ninna nODuve manadaNiya
nODi muddADi mAtADi saMtOShadi
pADi pogaLuvenu parama puruSha hari ||pa.||

keMdAvareyaMte pAdaMgaLu raMga
chaMdadi dhimidhimi kuNiyutali
aMduge gejjeyiM naliyuta bArO
araviMda nayana gOviMda nI bArO ||1||

kOTi sUrya prabhA kAMtigaLiMda
kirITa kuMDala bAvuli hoLeye
lalATa kastUri tilakaviDuve raMga
kUTa gOpAlara ATa sAkO Iga ||2||

maMgaLAtmaka mOhanakAyane
saMgItalOla sadguNashIla
aMgane lakumi sahitavAgi baMdenna
aMgaLadoLagADo puraMdara viThala ||3||

Photo By:
Submitted by: Sree Purandara Dasaru
Submitted on:
Category: Folklore
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಸರ್ವಜ್ನ ವಚನ ತ್ರಿಪದಿ -ಸರ್ವಜ್ಞ

ಓದಿದಾ ಓದು ತಾ , ವೇದ ಕಬ್ಬಿನ ಸಿಪ್ಪೆ
ಓದಿನಾ ಒಡಲನರಿಯದಿಹರೆ , ಸಿಪ್ಪೆ ಕ
ಬ್ಬಾದಂತೆ ಕಾಣೋ ಸರ್ವಜ್ಞ

There is no profit in blind reading
Blind reading is like sugarcane husk
Understanding is the essence of reading
making sugarcane out of the husk –
Sarvagna

*********

ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ
ಕಟ್ಟಿಹುದು ಬುತ್ತಿ , ಸರ್ವಜ್ಞ

Donating in person bears fruit to oneself
What is not donated will one day get into other hands
It is not good to feel lost after donating
In the future it reserves a place in heaven –
Sarvagna

*********
ಒಂದೊಂದು ಹನಿಬಿದ್ದು ನಿಂದಲ್ಲಿ ಮಡವಕ್ಕು
ಸಂದ ಸತ್ಪುರುಷ ನೋಡಲಾಗಿ ಪರಬೊಮ್ಮ
ಮುಂದೆ ಬಂದಕ್ಕು , ಸರ್ವಜ್ಞ

Just like a drop joining a drop can create an ocean,
A person by meeting good souls and learning moral values
earns an ocean of knowledge –
Sarvagna

*********

ಒಲೆಗುಂಡನೊಬ್ಬನೇ ಮೆಲಬಹುದು ಎಂದಿಹರೆ
ಮೆಲಬಹುದು ಎಂಬವನೆ ಜಾಣ , ಮೂರ್ಖನ
ಗೆಲುವಾಗದಯ್ಯ ಸರ್ವಜ್ಞ

Arguing with a fool is itself a foolish act
If a fool says iron can be chewed , one must say
yes it can be chewed , and allow the fool to win !! – Sarvagna

*********
ಎಲೆವಿಲ್ಲ ನಾಲಿಗೆಗೆ ಬಲವಿಲ್ಲ ಬಡವಂಗೆ
ತೊಲೆಕಂಬವಿಲ್ಲ ಗಗನಕ್ಕೆ , ದೇವರಲ್ಲಿ
ಕುಲಭೇದವಿಲ್ಲ ಸರ್ವಜ್ಞ

Tongue does not have bone , Poor do not have any support
Sky does not have any ladders , Similarly
God does not do any discrimination – Sarvagna

*********

ಕಿಚ್ಚಿನಲ್ಲಿ ಸುಕೃತವು , ಪಚ್ಚತಿರ ಕರ್ಪೂರವು
ಅಚ್ಚಳಿದು ನಿಜದಿ ನಿಂದಂತೆ ಭೇದವನು
ಮುಚ್ಚುವನೆ ಶರಣ , ಸರ್ವಜ್ಞ

On a fire, when we put pure ghee or pure camphor ,
it burns out and releases the same flame. Similarly , one who realizes that
Atma and Paramatma are one and same is a real Sharana –
Sarvagna

*********

ಈಶತ್ರವಿಲ್ಲದಲೆ ಈಶ್ವರನು ಎನಿಸಿಹನೆ ?
ಈಶನಾನೀಶನೇನಬೇಡ , ಜಗದಿ ಮಾ
ನೀಶನೇ ಈಶ ಸರ್ವಜ್ಞ

Anybody who does not have spirituality cannot be called a God
Nobody should be in the delusion saying ‘I am God’
Those people who are respected among all worlds are the real Gods. – Sarvagna

*********
ಅಂಕದರ್ಜುನ ಹೇಡಿ , ಶಂಕರನು ತಿರಿದುಂಡ
ಪಂಕಜನಾಭ ದನಕಾಯ್ದ , ಇನ್ನುಳಿದವರ
ಬಿಂಕಬೇನೆಂದ ಸರ್ವಜ್ಞ

The great warrior Arjuna had to cowardly disguise at some time
The great bestower Shankara had to beg at some time
The great Sri Krishna had to feed the cattle
Then what about we, normal beings –
Sarvagna

*********

ಒಡಲೆಂಬ ಹುತ್ತಕ್ಕೆ ನುಡಿದ ನಾಲಿಗೆ ಸರ್ಪ
ಕದುರೋಷನೆಂಬ ವಿಶವೇರಿ ಸಮತೆ ಗಾ
ರುಡಿಗನಂತಿಕ್ಕು ಸರ್ವಜ್ಞ

In our body which is like a termitarium , tongue is like a snake
When it tastes with a poison like Anger
It will be like an enemy for body balance –
Sarvagna

*********
ಅಂಗನೆಯು ಒಲಿಯುವುದು , ಬಂಗಾರ ದೊರೆಯುವುದು
ಸಂಗ್ರಾಮದೊಳು ಗೆಲ್ಲುವುದು , ಇವು ಮೂರು
ಸಂಗಯ್ಯನೊಲುಮೆ ಸರ್ವಜ್ಞ

Winning a girl , Getting Gold , Winning a war
All these 3 are under the blessings of God
Sarvagna

*********
ಅವಯವಗಳೆಲ್ಲರಿಗೆ ಸಮವಾಗಿ ಇರುತಿರಲು
ಭವಿ , ಭಕ್ತ , ಶ್ಚಪಚ , ಶೂದ್ರರಿವರಿಂತೆಂಬ
ಕವನವೆತ್ತಣದೋ ಸರ್ವಜ್ಞ

In God’s view every religion people have the same body,
When every function of it is same among all , classifying them as
Brahman , Shudra etc is just a word without content –
Sarvagna

*********
ಎಂಜಲವು ಶಾಚವು , ಸಂಜೆ ಎಂದೆನಬೇಡ
ಕುಂಜರವು ವನವನೆನೆವಂತೆ , ಬಿಡದೆನಿ
ರಂಜನನ ನೆನೆಯೂ – ಸರ್ವಜ್ಞ

There is no specific right or wrong time to pray God
Instead of saying now I am eating and not pure , its evening ,
I will pray later etc , you can fix your mind on God anytime- Sarvagna

*********
ಐವರಟ್ಟಾಳುಗಳ ಯೌವನದ ಹಿಂಡುಗಳು
ತವಕದಿಂದ ಹೊಯ ನಿಂದಾತ , ಜಗದೊಳಗೆ
ದೈವ ತಾನಕ್ಕು –
ಸರ್ವಜ್ಞ

Enemies like Anger , Lust , Greed, Delusion , Pride , Jealousy jump on the mind and try to injure it. One who controls them and blows them out will be a God – Sarvagna

*********
ಎಲುತೊಗಲು ನರಮಾಂಸ , ಬಲಿದ ಚರ್ಮದ ಹೊದಿಕೆ
ಹೊಲೆ ರಕ್ತ ಶುಕ್ಲದಿಂದಾದ ದೇಹಕೆ
ಕುಲವಾವುದಯ್ಯ ? ಸರ್ವಜ್ಞ

With nerves, bones , flesh , blood , semen, covered by beautiful skin
It forms our body which is common to everyone
Then where is upper class and lower class family –
Sarvagna

*********
ಆಕೆಯನು ಕಂಡು ಮನೆ ಆಕೆಯನು ಮರೆದಿಹರೆ
ಹಾಕಿದ ಉರಿಕೆ ಹರಿದಂತೆ , ಮನೆಯೊಳಿ
ದ್ದಾಕೆ ಕೆಡುಗು ಸರ್ವಜ್ಞ

If any man falls behind another women, forgetting his virtuous wife ,
his state will be like a broken string
his wife’s ire will burn his family –
Sarvagna

*********
ಅಂಗನೆಯ ಗುಣೆಯಾಗಿ , ಅಂಗಳದಿ ಹೊರಸಾಗಿ
ತಂಗಾಳಿ ಚೊನ್ನದಿರುಳಾಗಿ , ಬೇಸಿಗೆಂದು
ಹಿಂಗದೇ ಇರಲಿ ಸರ್ವಜ್ಞ

If our virtuous wife is together nearby,
And if in the yard of our home there a soft mattress
And If cool breeze touches us slowly
Then there is no fear of any long lasting summer – Sarvagna

*********
ಊರಿಂಗೆ ದಾರಿಯನು , ಆರು ತೋರಿದೊಡೇನು
ಸಾರಾಯದ ನಿಜವ ತೋರುವ ಗುರುವು ತಾ
ನಾರಾದರೇನು ? ಸರ್ವಜ್ಞ

What matters if anybody guides us the route to a village
What matters if anybody guides us towards truth
They are also our teachers – Sarvagna
*********
ಉಳ್ಳಲ್ಲಿ ಉಣಲಿಲ್ಲ ಉಳ್ಳಲ್ಲಿ ಉಡಲಿಲ್ಲ
ಉಳ್ಳಲ್ಲಿ ದಾನ ಕೊಪರೊಲ್ಲದವನೊದವೆ
ಕಳ್ಳನೆ , ನ್ರುಪಗೆ –
ಸರ್ವಜ್ಞ

Even when God has given many things
One who does not utilize it for oneself nor gives it to others
Such things finally reach either a thief or a King – Sarvagna

*********
ಉದ್ದಿನ ವಡೆ ಲೇಸು , ಬುದ್ಧಿಯ ನುಡಿ ಲೇಸು
ಬಿದ್ದೊಡನೆ ಕೈಗೆ ಬರಲೇಸು , ಶಿಶುವಿಗೆ
ಮುದ್ದಾಟ ಲೇಸು , ಸರ್ವಜ್ಞ

For taste and health Vada made from pulses is good
For a sad person, intellectual sayings brings in happiness
For any person, cuddling children brings more happiness – Sarvagna
*********
ಉಣಬಂದ ಜಂಗಮಗೆ ಉಣಬಡಿಸಲೋಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ , ಕೈ ಮುಗಿವ
ಬಣಗುಗಳ ನೋಡಾ , ಸರ್ವಜ್ಞ

What to say to a person’s superstitious beliefs
Who does not pay attention to a sage who comes starving for food
and salutes in front of a idol serving food for the idol –
Sarvagna

*********
ಇಂದ್ರನಾನೆಯ ನೇರಿ ಒಂದನೂ ಕೊಡಲರಿಯ
ಚಂದ್ರಶೇಕರನು ಮುದಿ ಎತ್ತನೇರಿ
ಬೇಕೆಂದುದನು ಕೊಡುವೆ – ಸರ್ವಜ್ಞ

Indra, who even after having an elephant like Airavatha does not know charity
While our Shiva Chandrashekara comes on an old bull
And gives happily anything who asks him with Bhakthi (Devotion) – Sarvagna

*********
ಇಕ್ಕಿದಾತನು ಉಂಡು , ನಕ್ಕು ಸ್ವರ್ಗಕ್ಕೆ ಹೋದ
ಇಕ್ಕದನು ಹೋದ ನರಕಕ್ಕೆ , ಲೋಕದೊಳ್ಳ
ಗಿಕ್ಕಲೇಬೇಕು , ಸರ್ವಜ್ಞ

One who eats and donates to others reaches heaven happily
One who only eats and does not donate , reaches hell
Hence one should eat and donate, so that others can also eat –
Sarvagna

*********
ಆರು ಬೆಟ್ಟವನೊಬ್ಬ ಹಾರಬಹುದೆಂದರೆ
ಹಾರಬಹುದೆಂದು ಎನಬೇಕು , ಮೂರ್ಕನೊಡ
ಹೋರಾಟ ಸಲ್ಲ ಸರ್ವಜ್ಞ

If some foolish person says he can jump 6 hills at once
One must accept it.
One must not enter into a debate with foolish people – Sarvagna

*********
ಅನ್ನವನು ಇಕ್ಕುವನು ಉನ್ನತವ ಪಡೆಯುವನು
ಉನ್ನತನು ಅಪ್ಪಯತಿಗಿಕ್ಕಿದಾ ಲೋಬಿ ತಾ
ಕುನ್ನಿಗೂ ಕಿರಿಯ ಸರ್ವಜ್ಞ

There is no high and low who donates food.
Those who wholeheartedly donate food definitely live in harmony
Those rich people who have the capacity to feed the elderly and still do not donate are lesser than a itchy dog –
Sarvagna

*********
ಅಲ್ಲಿಪ್ಪನಿಲ್ಲಿಪ್ಪನೆಲ್ಲಿಪ್ಪ ನೆನಬೇಡ
ಕಲ್ಲಿನಂತಿಪ್ಪ ಮಾನವನ , ಮನ ಕರಗೆ
ಅಲ್ಲಿಪ್ಪ ನೋಡ ಸರ್ವಜ್ಞ

God is present in clay , Stone everywhere
Not only that , if one makes an attempt by dissolving his stone heart
With Bhakthi , one finds God in his heart himself – Sarvagna

*********
ಅಡಿಕೆ ಇಲ್ಲದ ವೀಳ್ಯ , ಕಿಡಕಿ ಇಲ್ಲದ ಮನೆಯು
ಒಡಕು ಬಾಯವಳ ಮನೆವಾರ್ತೇ ಎಣ್ಣೆಯ
ಕುಡಿಕೆಯೊಡೆದಂತೆ ಸರ್ವಜ್ಞ

Betel leaves without nuts , a house without windows,
a wife without control on tongue, who disclose secrets
are like a broken clay oil lamp which never lets oil to provide light

Sarvagna

*********
ಅಂದಕನು ನಿಂದಿರಲು ಮುಂದೆ ಬಪ್ಪರ ಕಾಣ
ಬಂದರೆ ಬಾಯೆಂದೆನದಿರ್ಪ ಗರುವಿಯ
ದಂದುಗವೇ ಬೇಡ ಸರ್ವಜ್ಞ

A blind person may not recognize another standing in front of him
A normal person with ego does not notice people in front and passes without recognizing just like blinded. It is always good to stay away from such people.

Sarvagna

*********
ಅನ್ಯಸತಿಯನ್ನು ಕಂಡು , ತನ್ನ ಹೆತ್ತವಳೆಂದು
ಮನ್ನಿಸಿ ನೆಡೆದ ಪುರುಷಂಗೆ , ಇಹಪರದಿ
ಮುನ್ನ ಭಯವಿಲ್ಲ ಸರ್ವಜ್ನ

Any man who treats other’s wife as his mother
and respects her , he has no fear of the current or the after worlds.
Nothing bad touches him.
– Sarvagna

*********
ಅನ್ನ ದಾನಗಳಿಂತ ಮುನ್ನ ದಾನಗಳಿಲ್ಲ
ಅನ್ನಕೆ ಮಿಗಿಲು ಇನ್ನಿಲ್ಲ , ಜಗದೊಳಗೆ
ಅನ್ನವೇ ಪ್ರಾಣ ಸರ್ವಜ್ಞ

There is nothing greater than donating food
There is nothing more than food ,
World’s life runs on food

Sarvagna

**********
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಳ್ಪವರಿಂದ ಕಂಡು ಮತ್ತೆ
ಹಲವಂ ತಾನೆ ಸ್ವತಃಮಾಡಿ ತಿಳಿ ಎಂದ ಸರ್ವಜ್ಞ

Listen to those who know
Watch those who do
Rest do it yourself and learn –
Sarvagna

*********

Donate to ARE Foundation‘s Kannada Thrust Program

ಸರ್ವಜ್ಞ ಎಂಬುವನು ಗರ್ವದಿ೦ ಆದವನೆ
ಎಲ್ಲರ ಬಳಿ ಒಂದು-ಒಂದು ಮಾತನ್ನು ಕಲಿತು
ವಿದ್ಯೆ ಎನ್ನುವ ಪರ್ವತ ಆದ ನಮ್ಮ ಸರ್ವಜ್ಞ II ೧ II

Transliteration:
Sarvagna-embuvanu garvadhi-indha-aadhavane
Sarva-rollu ondhu-ondhu nudi-kalithu
Vidye-a parvatha-ve aadha sarvagna II ೧ II

Translation:
Sarvagna was made of vanity too
He learnt a word of wisdom from each
Thereby, became a mountain of knowledge

**********
ಏಳು ಕೋಟಿಯ ಏಳು ಲಕ್ಷದ
ಏಳು ಸಾವಿರದ ಎಪ್ಪತ್ತು ವಚನಗಳನ್ನು
ಹೇಳಿದಾನೆ ಕೇಳಿ ನಮ್ಮ ಸರ್ವಜ್ಞ II ೨ II

Transliteration:
elu kotiye koti, elu lakshave laksha
elu saaviradha eppatthu vachanagala
hellithanu kela sarvagna II ೨ II

Translation:
Seven crore Seven lac
Seven thousand and Seventy words
Have been uttered by me, listen oh folks

************
ಮನಸು ಇಲ್ಲದೆ ದೇವಸ್ಥಾನ ಸುತ್ತಿದಲ್ಲಿ ಫಲವೇನು
ಎತ್ತು ಗಾಣವನು ಹೊತ್ತು ತಾ
ನಿತ್ಯ ವಾಗಿ ಸುತ್ತಿ ಬಂದಂತೆ ಸರ್ವಜ್ಞ II ೪ II

Transliteration:
Chitthavu-illadhe gudiya suthidhode falavenu
etthu gaannavanu hotthu tha
nithyadhalli sutthibandhanthe sarvagna II ೪ II

Translation:
With the mind elsewhere, What is the use of going around temples?
It is similar to the Ox
going around the oil crusher, oh foolish men

************
ಮೂರ್ಖನಿಗೆ ಬುದ್ಧಿಯನು ಎಷ್ಟೇ ಕಾಲ ಹೇಳಿದರು
ಒಂದು ದೊಡ್ಡ ಕಲ್ಲಿನ ಮೇಲೆ ಮಳೆ ಸುರಿದಂತೆ
ಎಷ್ಟು ಸುರಿದರು ಆ ಕಲ್ಲು ನೀರು ಕುಡಿಯುವುದಿಲ್ಲ II ೫ II

Transliteration:
Murkha-nige Budhi-yanu noor-kala paellidharu
gorkalla-mel malle garedhare
Aa-kallu neeru-kudivudhe sarvagna II ೫ II

Translation:
Giving advice to a fool for hundred years
Is like heavy rain pouring on a stone
The stone does not drink the water
***********
ಸಾಲವನು ಕೊಂಡಾಗ ಹಾಲು ಕುಡಿದಂತೆ
ಸಾಲಿಗನು ಬಂದು ಹಣ ಕೇಳುವಾಗ
ಕಿಬ್ಬದಿಯ ಕಿಲು ಮುರಿದಂತೆ ಎಂದಿದಾನೆ ಸರ್ವಜ್ಞ II ೬ II

Transliteration:
Saalavanu kombaaga halogarundanthe
saligaru bandu elevaaga
kibbadhiya keelu muridhanthe sarvagna II ೬ II

Translation:
Money being borrowed is like nectar
When loaner torments to return the money
It aches like the backbone is being crushed
**********
ಅನ್ನವನು ನೀಡುವುದು ಸತ್ಯ ವನು ಹೇಳುವುದು
ತನ್ನ೦ತೆ ಪರರ ನೆನೆದರೆ
ಕೈಲಾಸ ನಿನ್ನದಾಗುವುದು ಎಂದಿದಾನೆ ನಮ್ಮ ಸರ್ವಜ್ಞ II ೭ II

Transliteration:
Anna-vanu Ikkuvudu nanni-yanu nudiyuvudu
thann-anthe parara bagedode
kailasa binna-anavakku sarvagna II ೭ II

Translation:
Giving food, telling truth
Considering oneness in all
Will surely lead YOU to Heaven
**********
ಎಲ್ಲರು ಬಲ್ಲವರಲ್ಲ ಬಲ್ಲವರಿದ್ದರು ಅವರು ಬಹಳ್ಳಿಲ
ಬಲ್ಲವರಿದ್ದರು ಬಲವಿಲ್ಲ
ಸಾಹಿತ್ಯ ಎಲ್ಲರಿಗಲ್ಲ ಎಂದಿದಾನೆ ಸರ್ವಜ್ಞ II ೮ II

Transliteration:
Ella Ballavarilla Balla-varu Bahalilla
bala-villa ballavariddhu
sahithya ellarigalla sarvagna II ೮ II

Translation:
No one knows everything, those who know are very few
There’s no strength even if there are those who know
The scripts are not available for everybody
**********
ಕಚ್ಚೆ ಕೈ ಮತ್ತೆ ಬಾಯಿ ಮಾತು ಹತೋಟಿಯಲಿದ್ದರೆ
ವಿಷ್ಣು ಬ್ರಹ್ಮ ನಂತೆ ಲೋಕದಲ್ಲಿ
ಚಿಂತೆ ಇಲ್ಲದೆ ಬಾಳುವನು ಎಂದಿದಾನೆ ನಮ್ಮ ಸರ್ವಜ್ಞ II ೯ II

Transliteration:
kacche-kai-baigalu icche-yali Iddhihare
achyuthanappa ajanappa lokadali
nishchinthanappa sarvagna II ೯ II

Translation:
If a man has control over his pants, hand and words
He would be like the Gods in this world
Walking without any worries
**********
ಒಳ್ಳೆಯವರ ಮಿತ್ರತೆ ಜೆನಿನಹಾಗೆ
ಕೆಟ್ಟವರ ಮಿತ್ರತೆ ಬಚ್ಚಲಿನ
ಕೊಚ್ಚೆಯ ಹಾಗಿರುತದೆ ಎಂದಿದಾನೆ ನಮ್ಮ ಸರ್ವಜ್ಞ II ೧೦ II

Transliteration:
Sajjanara sanga-vadhu hejjenu savidhanthe
durjanara sanga bacchalla
koccheyanthiruthadhe sarvagna II ೧೦ II

Translation:
The company of good men is like savouring honey
The company of bad men is like the stink
of sewage
**********
ಸೋಮರಸವನ್ನು ಕುಡಿಯುವನು ಹಂದಿಯಂತೆ
ಹಂದಿಯು ಕೆಲವುಕಡೆ ಉಪಕಾರಿ
ಕುಡುಕ ಹಂದಿಗೂ ಕಡಿಮೆ ಎಂದಿದಾನೆ ನಮ್ಮ ಸರ್ವಜ್ಞ II ೧೧ I

Transliteration:
Saendhiyanu saevipanu handiyanthi-ru-thi-hanu
handi-yondhede upakaari
kuduka handigu kadime sarvagna II ೧೧ II

Translation:
A drunkard is like a pig
Even a pig at times is useful
A drunkard is worse than a pig
**********
ಹೇಳದೆ ಕೊಡುವವನು ಉತ್ತಮನು
ಹೇಳಿ ಕೊಡುವವನು ಮಧ್ಯಮನು
ಸುಮ್ಮನೆ ಹೇಳಿ ಕೊಡದಿರುವಂತವನೆ ಅಧಮನು II ೧೨ II

Transliteration:
Aada-dhele koduvavanu roodi-yolagutthamanu
aadi koduvavanu madhyamanu
adhama thaanadi kodadhavanu sarvagna II ೧೨ II

Translation:
He who speaks not of his charity is superior
He who speaks and gives is normal
He who boasts and gives not, is inferior
**********
ಇರಲು ಮನೆಯು ಖರ್ಚಿಗೆ ಹಣವು
ಇಷ್ಟದಂತೆ ನಡೆವ ಸತಿಯು ಇರಲು
ಸ್ವರ್ಗವು ಬೇಡದಂತಾಗುವುದು ಸರ್ವಜ್ಞ II ೧೩ II

Transliteration:
Becchana maneyaagi vecchakke honnagi
iccheyanaritu nadeva satiyaagi
swargakke kicchu-biddhanthe sarvagna II ೧೩ II

Translation:
A warm house, handsome money
And an understanding wife for a MAN
Even Heavens cannot match these comforts
**********
ಹೂವಿಲ್ಲದೆ ಪೂಜೆಯು ಕುದುರೆ ಇಲ್ಲದ ರಾಜನು
ಭಾಷೆ ಅರಿಯದವಳ ಸಂಗಾತವು
ಪ್ರಯೋಜನಕ್ಕೆ ಬಾರದು ಎಂದಿದಾನೆ ನಮ್ಮ ಸರ್ವಜ್ಞ II ೧೪ II

Transliteration:
Pushpavilladha pooje ashvavilladha arasa
bhaashebaaradavala gelethanavu
vyarthakaanayya sarvagna II ೧೪ II

Translation:
A worship without flowers, A king without a horse
Friendship with a woman who speaks not your language
All these do not come to use anywhere
**********
ಆರು ಬೆಟ್ಟವನು ಹಾರಿದನು ಎಂದರೆ
ಅವನು ಹಾರಿದ ಎಂದು ಒಪ್ಪಬೇಕು ಮೂರ್ಖರ ಬಳಿ
ಜಗಳ ಬೇಡ ಇಂತಿ ಸರ್ವಜ್ಞ II ೧೫ II

Transliteration:
Aaru-bettava haaridha-nen-dhare
haridha-nen-dena-beku murkha-rolu
kalaha-ve salla sarvagna II ೧೫ II

Translation:
I jumped across six mountains;
He did you pronounce; With fools!
Prove them not wrong, Sarvagna

Donate to ARE Foundation‘s Kannada Thrust Program

Photo By: –
Submitted by: ಸರ್ವಜ್ಞ
Submitted on:
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Tags: gadegalu, vachanagalu, tripaadi, ಗಾದೆಗಳು , ವಚನಗಳು , ತ್ರಿಪಾಡಿ, sarvajnya, sarvagnya, sarvajna, karnataka, kannada poets

ಅಲ್ಲಿ ಇಲ್ಲಿ ಎಲ್ಲೀ…!? -Shri.Ginde

ಕಳೆಯೂತಿರಲು ದಿನಗಳು,
ನೆಮ್ಮದಿಯ ಹುಡುಕಾಟದಲ್ಲಿ.
ಸಿಗುವುದೇ ಸಂತೋಷ, ಸುಖ ಶಾಂತಿ
ನಮ್ಮ ಮತ್ತು ನಮ್ಮವರ ಬದುಕಿನಲ್ಲಿ,
ಯಾವರೀತಿ ಬದುಕಬೇಕೆಂದು
ಯಾರು ಹೇಳಿಕೊಡರಿಲ್ಲಿ
ಅದನ್ನು ಕಲಿಯಬೇಕು ನಾವಿಲ್ಲಿ..
ಗೆಳೆಯ ಹೇಳಿದ ಚುಟುಕು ನೆನಪಾಯಿತು ನನಗಿಲ್ಲಿ ,
ಜೀವನವೇ ಒಂದು ಆಟ
ಸೋಲು ಗೆಲುವಿನ ಕಾದಾಟ
ಪ್ರೀತಿ ವಿಶ್ವಾಸಗಳ ಹುಡುಕಾಟ
ಬಂಧ ಸಂಬಂಧಗಳ ತೊಳಲಾಟ
ಆಸೆ ಆಕಾಂಕ್ಷೆಗಳ ಗೋಳಾಟ
ಮೂರು ಗೆರೆಗಳ ಹಣೆಬರಹದ ನಾಟಕ.
ಹಾಗೆ, ಆಡಬೇಕು ಪ್ರತಿಯೊಬ್ಬನಿಲ್ಲಿ…
ಬದುಕಲೂ ಗೆಲ್ಲಲೆ ಬೇಕು ನೀನಿಲ್ಲಿ…
ಗೆಲ್ಲಲೆ ಬೇಕು ನೀನಿಲ್ಲಿ…!
Shri.Ginde

Photo By:
Submitted by: Shri.Ginde
Submitted on: Mon Jun 27 2016 14:12:19 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಓಡಿ ಬಾರಯ್ಯ -Sree Purandara Dasaru

ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ||ಪ.||

ಕೆಂದಾವರೆಯಂತೆ ಪಾದಂಗಳು ರಂಗ
ಚಂದದಿ ಧಿಮಿಧಿಮಿ ಕುಣಿಯುತಲಿ
ಅಂದುಗೆ ಗೆಜ್ಜೆಯಿಂ ನಲಿಯುತ ಬಾರೋ
ಅರವಿಂದ ನಯನ ಗೋವಿಂದ ನೀ ಬಾರೋ ||೧||

ಕೋಟಿ ಸೂರ್ಯ ಪ್ರಭಾ ಕಾಂತಿಗಳಿಂದ
ಕಿರೀಟ ಕುಂಡಲ ಬಾವುಲಿ ಹೊಳೆಯೆ
ಲಲಾಟ ಕಸ್ತೂರಿ ತಿಲಕವಿಡುವೆ ರಂಗ
ಕೂಟ ಗೋಪಾಲರ ಆಟ ಸಾಕೋ ಈಗ ||೨||

ಮಂಗಳಾತ್ಮಕ ಮೋಹನಕಾಯನೆ
ಸಂಗೀತಲೋಲ ಸದ್ಗುಣಶೀಲ
ಅಂಗನೆ ಲಕುಮಿ ಸಹಿತವಾಗಿ ಬಂದೆನ್ನ
ಅಂಗಳದೊಳಗಾಡೊ ಪುರಂದರ ವಿಠಲ ||೩||

ODi bArayya vaikuMThapati ninna nODuve manadaNiya
nODi muddADi mAtADi saMtOShadi
pADi pogaLuvenu parama puruSha hari ||pa.||

keMdAvareyaMte pAdaMgaLu raMga
chaMdadi dhimidhimi kuNiyutali
aMduge gejjeyiM naliyuta bArO
araviMda nayana gOviMda nI bArO ||1||

kOTi sUrya prabhA kAMtigaLiMda
kirITa kuMDala bAvuli hoLeye
lalATa kastUri tilakaviDuve raMga
kUTa gOpAlara ATa sAkO Iga ||2||

maMgaLAtmaka mOhanakAyane
saMgItalOla sadguNashIla
aMgane lakumi sahitavAgi baMdenna
aMgaLadoLagADo puraMdara viThala ||3||

Category: Folklore
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಬಾನಿನಲ್ಲಿ ಚಂದ್ರ -Shri.Ginde

ಬಾನಿನಲ್ಲಿ ಮೋಡವೂ ಕವಿದಿರಲೂ
ಕಾಣದಿರಲೂ ಚಂದಿರ ಸುತ್ತಲೂ ಎಲ್ಲೂ
ಆವರಿಸಿದೆ ಸುತ್ತಲೂ ಕರಿ ನೆರಳು, ಛಾಯೆ…
ಬಲ್ಲವರು ಯಾರು ಈ ಮಾಯೆ..!?

ಮರು ಬರುವನೇ ಚಂದಿರ ಬಾನಿನಲ್ಲಿ!
ಪ್ರಶ್ನಿಸಲೀ ನಾನು ಯಾರ,ಯಾರಲ್ಲೀ ?
ಬಿಡಿಸುವವರಾರೂ ಈ ಒಗಟ…!!

ಹ್ಹ.. ಹ್ಹ.. ಹ್ಹ..! ನೆನಪಾಯಿತು ಗಾದೆ,
ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ.
ಬದುಕೆಂಬ ಈ ನಾಲ್ಕು ದಿನಗಳ ಮಾಯದಾಟ,
ಕಲಿವರಿಲ್ಲಿ ಎಲ್ಲರೂ ಜೀವನಪಾಠ.
ಸುಖ- ದುಃಖಗಳ ಸಮ್ಮಿಲನ,
ನೋವು- ನಲಿವಿನ ಕೂಟ..

ಅರೆ ರೇ..!? ಕಾಲವು ಸರಿಯಿತು ,
ಮೋಡವೂ ಕರಗಿತು,
ಬೆಳಕು ಹರಿಯಿತು ನೀ.. ಕೇಳಿಲ್ಲಿ…
ಚಂದಿರನಿಲ್ಲದಿರೆನಂತೆ,
ಮೂಡಣದಿ ಬಂದಿಹ ನೇಸರ ನೋಡಲ್ಲಿ.. ನೀ.. ನೋಡಲ್ಲಿ…!!!
— ಶ್ರೀಧರ ಗಿಂಡೆ

Shri.Ginde

Photo By:
Submitted by: Shri.Ginde
Submitted on: Tue May 17 2016 14:40:45 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ನಾ ಕಂಡ ನೆನಪು -Muthyalanna

ಕಣ್ಣಿಗೆ ಕಲ್ಪನೆ ಮನಸಿಗೆ ಭಾವನೆ

Muthyalanna

Photo By:
Submitted by: Muthyalanna
Submitted on: Thu Dec 03 2015 13:22:45 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ನನ್ನ ಕವಿತೆ (Nanna Kavithe) -Bhuvi

ಕವಿಯಾಗಲೆಂದು ಬರೆಯಲಿಲ್ಲ ನಾ ಕವನಗಳನ್ನ
ನಿನ್ನ ಮರೆಯಲೆಂದೇ ಗೀಚಿದೆ ಈ ಅಕ್ಷರಗಳನ್ನ
ಪ್ರಯತ್ನಿಸುತ್ತಿರುವೆ ಮರೆಯಲು ನಿನ್ನ ನೆನಪುಗಳನ್ನ
ಆದರೇನು ಮಾಡಲಿ…ಈ ಅಕ್ಷರಗಳಿಗೆ
ಸ್ಫೂರ್ತಿ ನೀನೇ ಅಲ್ಲವೇ ಗೆಳೆಯಾ?
ಮನದಲ್ಲೇ ಪ್ರೀತಿಸಿದೆ ಅಂದಿನಿಂದ…
ಹೇಳಲಾರದ ಪುಟ್ಟದೊಂದು ಹೆದರಿಕೆಯಿಂದ
ಹೇಳು, ನಿನಗೆಂದೂ ಅರ್ಥವಾಗಲಿಲ್ಲವೇ
ಈ ನನ್ನ ಮನದ ಒಲವು ?
ತುಂಬಾ ದೂರವಾಗಿರುವೆ ಇಂದು ನೀ ನನ್ನಿಂದ
ಅದಕ್ಕಿಂದು ಈ ಕವನ ಬಂದಿದೆ ನನ್ನೀ ಮನದಿಂದ
Bhuvi

Photo By:
Submitted by: Bhuvi
Submitted on: Thu Sep 17 2015 14:19:48 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಮರೀಚಿಕೆಯ ಬೆನ್ನೇರಿ (mareechikeya benneri) -Bhuvi

ಕನಸಿನ ಕೋಟೆಯೊಳಗೆ ಬಂಧಿಯಾಗಿರುವೆ
ಓ ಗೆಳೆಯಾ …
ಮರೀಚಿಕೆಯೆಂಬ ಕುದುರೆಯೇರಿ ಹೊರಟಿರುವೆ
ಕವಲುದಾರಿಯಲಿ…
ನಿನ್ನ ಸೇರಬೇಕೆಂಬ ತವಕದಲಿ …
ಕಾಗದದ ದೋಣಿಯಾದರೂ ಸಿಗಲಿ
ಮಣ್ಣಿನ ಬೊಂಬೆಯಾದರೂ ಸಿಗಲಿ
ನಂಬಿಕೆಯನ್ನಿರಿಸಿಕೊಂಡು
ಬದುಕುತ್ತಿರುವೆ ನನ್ನೀ ಬದುಕಲಿ

Bhuvi

Photo By:
Submitted by: Bhuvi
Submitted on: Thu Sep 17 2015 14:05:25 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಪುಸ್ತಕಗಳು -Janaki

ಕೆಲವು ಪುಸ್ತಕಗಳು ನಿದ್ದೆ ಮಾತ್ರೆಯಂತೆ..

Photo By: –
Submitted by: Janaki
Submitted on: Thu Jul 09 2015 10:02:37 GMT+0530 (IST)
Category: Other
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಯಾವ ಭಾಷೆಯ … -ಹಾ ಮಾ ನಾಯಕ

ಯಾವ ಭಾಷೆಯ ಹೀರಿಕೆಯೂ ಸರಿಯಲ್ಲ, ಯಾವುದೇ ಭಾಷೆಯ ಕಲಿಕೆಯನ್ನು ತಡೆಯುವುದೂ ಸರಿಯಲ್ಲ – ಹಾ ಮಾ ನಾಯಕ

Photo By: –
Submitted by: Sahana Harekrsihna
Submitted on: Fri Jun 19 2015 15:04:20 GMT+0530 (IST)
Category: Non-Original work with acknowledgements
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕನಸು -vinaya gowda

ಕನಸಿಲ್ಲದ ಮನಸಿನಲ್ಲಿ ಕನಸಾಗಿ ಬಂದೆ ನೀನು
ನಿನ್ನಂದ ಚಂದವ ಹೊಗಳಲು ನಾಚುತ್ತಿರುವೆ ನೀನು
ಕೈ ಸೋಕಿಸಲು ದೂರ ಸರಿಯುತ್ತಿರುವೆ ನೀನು
ಕಣ್ಮುಚ್ಚಿ ಚುಂಬಿಸಲು ಕಣ್ಮರೆಯಾದೆಯಲ್ಲ ನೀನು
ಅರಳಿ ಉದುರುವ ಹೂವಾದೆಯ ನೀನು
ನಿನ್ನ ಸವಿ ಕನಸಿಗೆ ಕಾಯುತ್ತಿರುವೆ ನಾನು ….
ಇಂತಿ ನಿನ್ನ ಪ್ರೀತಿಯ
-ವಿನಯ
vinaya gowda

Photo By:
Submitted by: vinaya gowda
Submitted on: Thu Feb 12 2015 16:52:50 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಚಂದ್ರ ಹಾಗೂ ಕಲಾವಿದನ ಕುಂಚ. -priyanka_rosenknospe

FullMoonLarge.jpg
ನಾನು ನಾನಲ್ಲ..
ನಾನು ಬಾನಲ್ಲಿ ನಗುವ ಚಂದಿರನ
ಸೊಗಸಾದ ಪದಗಳಲ್ಲಿ ಸೆರೆಹಿಡಿವ ಕವಿ…
ನಾನು ನಾನಲ್ಲ,
ನಾನು ಇಳೆಯ ಹಸಿರು ಕಾನನವನ್ನು
ಹಸನು ಮಾಡುವ ಸೂರ್ಯ ಕಿರಣಗಳನ್ನು
ಕುಂಚದಲ್ಲಿ ಹಿಡಿದಿಡುವ ಚಿತ್ರಗಾರ …
ನಾನು ನಾನೇನಲ್ಲ,
ನಾನು ನಿಸರ್ಗದ ಸವಿಯನ್ನು
ಕಣ್ಣಂಚಿನಲ್ಲಿ ಸೆರೆಹಿಡಿವ ನಾನೇ,
ಕಲಾವಿದ. . . .
priyanka_rosenknospe

Photo By: Priyanka
Submitted by: priyanka_rosenknospe
Submitted on: Tue Jan 13 2015 19:46:03 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ನಾ ಸ್ವಾರ್ಥಿ -NMNK

ಆ ದಿನಾ ಜಾತ್ರೆಯಲ್ಲಿ ,
ಜನಜಂಗುಳಿಯ ಪಕ್ಕದಲ್ಲಿ ,
ಭಿಕ್ಷುಕರು, ಮುಗ್ಧ ಮಕ್ಕಳೊಂದಿಗೆ
ಭಿಕ್ಷೆ ಹಾಕಾಬೇಕಂದಿದ್ದೆ ಅಂತರಂಗದೊಂದಿಗೆ
ಯಾಕೋ ಬಹಿರಂಗ ಸ್ವಾರ್ಥವಾಯಿತು,
ಹಣ ಇದ್ದರೂ ! ನಾ ಸ್ವಾರ್ಥಿಯದೇ !
ಓ ದೇವರೇ ನನಗೇಕೆ ಈ ಶಿಕ್ಷೆ ?

Photo By:
Submitted by: NMNK
Submitted on: Thu Jan 15 2015 17:11:57 GMT+0530 (IST)
Category: Original Chutuku
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕರ್ತವ್ಯ -Priyanka_rosenknospe

mother_child_AE11_l.jpg
ಪ್ರವೀಣನಿಗೆ ಮದುವೆಗಾಗಿ ಮನೆಯಲ್ಲಿ ಸಂಬಂಧ ಹುಡುಕುತ್ತಿದ್ದರು.
ಅವನು ಎಂ.ಎಸ್ ಮುಗಿಸಿಕೊಂಡು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ಮದುವೆ ಮಾಡಿಬಿಡುವ ಆತುರ ಸಾವಿತ್ರಮ್ಮನವರಿಗೆ.
ತಂದೆಯಿಲ್ಲದ, ಒಬ್ಬನೇ ಮಗನನ್ನು ಹತ್ತು ಮಾತು ಕೇಳಿಕೊಂಡೂ ಓದಿಸಿ,ಕೊಂಕು ಮಾಡಿದವರ ಮುಂದೆ ಬಿಂಕದಿಂದ ಹೆಮ್ಮೆಯಿಂದ ಜೀವನ ನಡೆಸುವಂತೆ ಮಾಡಿದ ಸಾವಿತ್ರಮ್ಮ, ಮಗನಿಗೆ ಮದುವೆ ಒಂದು ಮಾಡಿ ನೆಮ್ಮದಿಯಾಗಿ ಉಸಿರು ಬಿಡುವ ಪಣ ತೊಟ್ಟರು..
ಭದ್ರಾವತಿಯ ಮೂಲದವರಾದ ಸಾವಿತ್ರಮ್ಮ ಅವರ ತಮ್ಮ ಚಂದ್ರಶೇಖರನನ್ನು ಬರಹೇಳಿದ್ದು ಪ್ರವೀಣ್ ಮದುವೆ ವಿಚಾರಕ್ಕಾಗಿಯೇ.
ಪ್ರವೀಣನಿಗೆ ಮದುವೆ,ಸಂಸಾರ ಅಂದರೆ ಆಗದು.
“ಅಮ್ಮ,ಜೀವನದಲ್ಲಿ ಅದೇ ಗುರಿ ಅಲ್ಲಮ್ಮ ” ಎನ್ನುತ್ತಿದ್ದ.
ಆದರೂ, ತಾಯಿ ತನ್ನ ಕರ್ತವ್ಯ ಮರೆಯುವಳೇ?
ಅಂತೂ ತಮ್ಮ ಚಂದ್ರಶೇಖರನ ಕರೆಸಿ ಹೊಸಮನೆಯ ಒಂದು ಹುಡುಗಿಯ ಬಗ್ಗೆ ವಿಚಾರಿಸಿದ್ದಾಯಿತು.
ಹುಡುಗಿಯು ಬಿ.ಎ ಓದಿದ್ದಾಳೆ.
ಹೊಸಮನೆ ಸರ್ಕಲ್ ಹತ್ತಿರದ ಸರಕಾರಿ ಲೈಬ್ರರಿಯಲ್ಲಿ ಕೆಲಸ, ಒಳ್ಳೆಯ ಹುಡುಗಿ ..ಮನೆಯ ಕೆಲಸದಲ್ಲಂತೂ ತುಂಬಾ ಅಚ್ಚುಕಟ್ಟು .
ತಂದೆ ರೈಲ್ವೆ ಇಲಾಖೆಯಲ್ಲೆ ಕೆಲಸದಲ್ಲಿದ್ದಾರೆ .ತಾಯಿ ಇಲ್ಲದ ಮಗು.
ಒಬ್ಬ ತಮ್ಮ ಇದ್ದಾನೆ..
ಪಾಪ. ಅನ್ನಿಸಿತು .. ತಾಯಿ ಇಲ್ಲದ ಹೆಣ್ಣು ಮಕ್ಕಳ ಕಷ್ಟ ಏನೆಂದು ಸ್ವತಃ ಆಕೆಗೆ ಗೊತ್ತಿದೆ..
ತಾಯಿಯನ್ನು ಚಿಕ್ಕ ವಯಸ್ಸಲ್ಲೇ ಕಳೆದುಕೊಂಡ ಸಾವಿತ್ರಮ್ಮನ ಕಣ್ಮುಂದೆ ಸಾವಿರ ನೆನಪು ಹಾದುಹೋದವು..
ಸ್ವಲ್ಪ ಕಣ್ಣಂಚಿನಲ್ಲಿದ್ದ ನೀರನ್ನು ಒರೆಸಿಕೊಂಡ ಸಾವಿತ್ರಮ್ಮ ಆ ಹುಡುಗಿಯನ್ನು ನೋಡಲು ಇದೇ ಮಂಗಳವಾರ ಹೋಗುವುದು ಎಂದು ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡರು.
ಸಾವಿತ್ರಮ್ಮ ದೆಹಲಿಯಲ್ಲಿ ಕೆಲಸದ ಮೇಲೆ ಹೋಗಿದ್ದ ಪ್ರವೀಣನಿಗೆ ತಕ್ಷಣ ಹೊರಟು ಬರಲು ಹೇಳಿ ಪತ್ರ ಬರೆದರು.

ಇನ್ನು ತನ್ನ ಜವಾಬ್ದಾರಿಯೆಲ್ಲವೂ ಮುಗಿವುದು ಎಂದು ತಾಯಿಯು ಸಂತಸಪಟ್ಟಳು.
ಮರುದಿನವೇ ಎಲ್ಲ ಸಂಭ್ರಮದಿಂದ ತಯಾರಿ ನಡೆದಿತ್ತು.
ಹುಡುಗಿಯ ತಂದೆ ಬಹಳ ಸಂತೋಷದಿಂದ ಅವರ ಬರುವಿಕೆಗಾಗಿ ಕಾದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಸಾವಿತ್ರಮ್ಮ ಗಣಪತಿ ಭಟ್ಟರಿಗೆ ಜಾತಕ ತೋರಿಸಿ, ಎಲ್ಲಾ ಸರಿಯಾಗಿದೆ ದೋಷಗಳೇನೂ ಇಲ್ಲವೆಂದು ತಿಳಿದು ಬಹಳ ಸಂತಸ ಪಟ್ಟರು. ಅಲ್ಲಿಯೇ ದೇವಸ್ಥಾನಕ್ಕೆ ಹೋಗಿ ಮಗನ ಹೆಸರು ಹೇಳಿ ಅರ್ಚನೆ ಮಾಡಿಸಿದರು.
ಮನೆಗೆ ಬಂದಾಗ ನಾಲ್ಕು ಘಂಟೆ ಸಾಯಂಕಾಲ..
ಅವರಿಗಾಗಿ ಬಾಗಿಲ ಬಳಿ ಪೋಸ್ಟಮನ್ ನಾಗರಾಜ ಕಾಯುತ್ತ ನಿಂತಿದ್ದ..
ಮಗನಿಂದ ಕಾಗದ ಬಂದಿತ್ತು..ಮೊದಲು ಮಗನ ಪತ್ರ ಬಂದರೆ ಸಂತೋಷಪಡುತ್ತಿದ್ದ
ಸಾವಿತ್ರಮ್ಮ ಇಂದು ಸ್ವಲ್ಪ ಹೆದರುತ್ತಲೆ ಕಾಗದ ಬಿಡಿಸಿ ಓದತೊಡಗಿದರು.

ಅಮ್ಮ,
ನಾನು ನಿನ್ನ ಪತ್ರ ಓದಿದೆ.
ನಿನಗೆ ಹೇಗೆ ಹೇಳುವುದೋ ತಿಳಿದಿಲ್ಲ..
ನಾನು ಇಲ್ಲಿ ಕೆಲಸ ಸಿಗದೇ ನಿನಗೆ ಪತ್ರ ಬರೆದ ಮರುದಿನವೇ ನನಗೊಬ್ಬರು ಪರಿಚಯವಾದರು.
ಅವರ ಹೆಸರಾಂತ ಕಂಪನಿಯಲ್ಲಿಯೇ ನನಗೊಂದು ಕೆಲಸ ಕೊಟ್ಟ ಮಹಾನ್ ವ್ಯಕ್ತಿ ಅವರು.
ನನಗೆ ಕಷ್ಟ ಬಂದಾಗಲೆಲ್ಲ ತಂದೆಯ ರೀತಿ ನಿಂತು ಸಹಾಯ ಮಾಡಿದ್ದಾರೆ.
ಅವರು ಈಗ ಹಾಸಿಗೆ ಹಿಡಿದಿದ್ದಾರೆ.
ಅವರ ಒಬ್ಬಳೇ ಮಗಳು ಅನು.
ಅವರ ಕಾಯಿಲೆ ವಾಸಿಯಾಗದೆಂದು, ಅನು ವನ್ನು ನಾನು ಮದುವೆಯಾಗಬೇಕೆಂದು ಅವರ ಆಸೆ.
ಅಮ್ಮ,
ನೀನೇ ಹೇಳಿದ್ದೆ, ಕಷ್ಟಕ್ಕೆ ಆದವರನ್ನು ಕೈಬಿಡಬಾರದೆಂದು.
ನಾನು ನಿನ್ನ ಮಾತನ್ನು ಪಾಲಿಸುವುದು ನಿನಗೆ ಖುಷಿ ಅಲ್ಲವೇನಮ್ಮ?
ದಯವಿಟ್ಟು ನನ್ನ ಮದುವೆಗೆ ಬಂದು ನಮ್ಮನ್ನು ಆಶೀರ್ವದಿಸು..ಅನು ನಿನಗೆ ತಕ್ಕ ಸೊಸೆ ಅಮ್ಮ..
ಇಂತಿ,
ಪ್ರೀತಿಯ ಮಗ
ಪ್ರವೀಣ್

ಪತ್ರದ ಜೊತೆಗೇ ಕಾರ್ಡ್ ಒಂದು ಕಾಣಿಸಿತು…

ತಾಯಿ ಹೃದಯ ಹೆಮ್ಮೆ ಪಡಬೇಕೊ ಅಥವಾ ಅಳಬೇಕೋ ಅರಿಯದೆ ತಳಮಳಗೊಂಡಿತು …
ತಾನು ಕರ್ತವ್ಯವನ್ನು ನಿಭಾಯಿಸಲಿಲ್ಲ ಅನ್ನುವ ಕೊರಗಿನಿಂದ ಆ ಜೀವ ನೊಂದು
ಕಾಣದ ಊರಿಗೆ ಪಯಣ ಬೆಳೆಸಿತ್ತು.

Priyanka_rosenknospe

Photo By: Priyanka Rosenknospe
Submitted by: Priyanka_rosenknospe
Submitted on: Wed Jan 14 2015 17:25:34 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕನ್ನಡ ಪ್ರೀತಿ -Shilpa V

ಮತ್ತೆ ಚಿಗುರಿತು ನನ್ನಲಿ ಕನ್ನಡದ ಪ್ರೀತಿ
ಹೇಳಿಕೊಳ್ಳಲು ಇರುವದು ನನಗೆಂಥ ಭೀತಿ!
ಎಲ್ಲಡಗಿ ಕುಳಿತಿತ್ತು ಈ ನನ್ನ ಪ್ರೀತಿ!
ಬಹಿರಂಗವಾಯಿತು ಇಂದು ಈ ರೀತಿ!
ಇನ್ನಿಲ್ಲ ನನಗೆ ಯಾರ ಸ್ಮೃತಿ
ಓ ಕನ್ನಡವೇ, ನೀನೇ ನನ್ನ ಅಧಿಪತಿ! ನೀನೇ ನನ್ನ ಅಧಿಪತಿ!
-Shilpa V

Photo By:-
Submitted by: Shilpa V
Submitted on: Thu Oct 30 2014 15:13:58 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಆಲಸ್ಯ -Shilpa Vairagi

ಓ ಆಲಸ್ಯವೇ ನೀನೇಕೆ ನನ್ನಲ್ಲಿ ಮನೆ ಮಾಡಿರುವೆ ?
ಆಹ್ವಾನವಿಲ್ಲದೆ ನನ್ನ ಮನದಲ್ಲಿ ಬoದು ಕುಳಿತಿರುವೆ?
ನಿನ್ನನ್ನು ಹೊರದೂಡಲು ಎಷ್ಟೆಲ್ಲಾ ಕರಾಮತ್ತು ನಾ ನಡೆಸಿಲ್ಲ?
ನನಗೆ ಗೊತ್ತು ನಿನ್ನಿoದ ನನಗೆ ಎಳ್ಳಷ್ಟೂ ಒಳಿತಿಲ್ಲ.
ಗೊತ್ತಿದ್ದೂ ಗೊತ್ತಿದ್ದೂ ನಿನ್ನ ಬಲೆಯಲ್ಲಿ ಸಿಲುಕಿರುವೆ,
ಪದೇ ಪದೇ ನನ್ನ ಗೆಲುವಿಗೇಕೆ ನೀ ಅಡ್ಡ ಬರುತಿರುವೆ?
ಸಹಿಸಲಾರೆನು ಇನ್ನು, ನಿನ್ನ ಈ ನಿಲುವನು,
ಕೀಳುವೆ ಬುಡಸಹಿತ ಇoದು ನಿನ್ನನು!!
Shilpa Vairagi

Photo By:
Submitted by: Shilpa Vairagi
Submitted on: Tue Sep 23 2014 17:41:41 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕೊಟ್ಟ ಮೇಲೆ ಯೋಚನೆ ಮಾಡಬಾರದು. -Sahana Harekrishna

ಕೊಟ್ಟ ಮೇಲೆ ಯೋಚನೆ ಮಾಡಬಾರದು.

Photo By:
Submitted by: Sahana Harekrishna
Submitted on: Wed Jul 16 2014 11:02:55 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕೋಶ ಓದಬೇಕು , ದೇಶ ಸುತ್ತಬೇಕು. -Sahana Harekrishna

ಕೋಶ ಓದಬೇಕು , ದೇಶ ಸುತ್ತಬೇಕು.

Photo By:
Submitted by: Sahana Harekrishna
Submitted on: Mon Jul 14 2014 12:13:27 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಹತ್ತು ಕೂಡಿದಲ್ಲಿ ಮುತ್ತು -Sahana Harekrishna

ಹತ್ತು ಕೂಡಿದಲ್ಲಿ ಮುತ್ತು

Photo By:
Submitted by: Sahana Harekrishna
Submitted on: Fri Jul 11 2014 23:00:36 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಮದುವೆಗೆ ಮಾಡಿದ್ದು ಚಪ್ಪರಕ್ಕೆ ಮುಗಿಯಿತು. -Sahana Harekrishna

ಮದುವೆಗೆ ಮಾಡಿದ್ದು ಚಪ್ಪರಕ್ಕೆ ಮುಗಿಯಿತು.

Photo By:
Submitted by: Sahana Harekrishna
Submitted on: Thu Jul 17 2014 11:46:11 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಒಬ್ಬ ತಾಯಿಯ ಕಥೆ -Susan

ಒಬ್ಬ ತಾಯಿ ತನ್ನ ಪುಟ್ಟ ಮಗುವಿನ ಬಳಿ ಕುಳಿತಿದ್ದಳು. ಅವಳು ಬಹಳ ಖಿನ್ನತೆಯಲ್ಲಿದ್ದಳು, ತನ್ನ ಮಗುವು ಸತ್ತು ಹೋಗುವುದು ಎಂಬ ಭಯದಲ್ಲಿದ್ದಳು! ಅವಳ ಮಗುವು ಬಹಳ ಬಳಲಿತ್ತು. ಅದರ ಪುಟ್ಟ ಕಣ್ಣುಗಳು ಮುಚ್ಚಿತ್ತು ಮತ್ತು ಅದು ಬಹಳ ನಿಧಾನವಾಗಿ ಉಸಿರಾಡುತ್ತಿದ್ದು, ಆಗಿಂದಾಗ ನಿಟ್ಟುಸಿರಿನಂತಹ ಭಾರಿ ದೀರ್ಘಶ್ವಾಸವನ್ನು ಬಿಡುತ್ತತ್ತು. ಆಗ ಆ ತಾಯಿಯು ಇನ್ನೂ ಹೆಚ್ಚು ದುಃಖದಿಂದ ಆ ಎಳೆ ಕೂಸನ್ನು ನೋಡುತ್ತಿದ್ದಳು.

ಆಗ ಯಾರೋ ಬಾಗಿಲು ತಟ್ಟುವ ಶಬ್ದವು ಕೇಳಿಸಿತು ಮತ್ತು ಕುದುರೆ ಚರ್ಮದಿಂದ ತಯಾರಿಸಲ್ಪಟ್ಟ ದೊಡ್ಡ ಬಟ್ಟೆಯಂತಹ ಒಂದನ್ನು ಹೊದ್ದುಕೊಂಡಿದ್ದ ಒಬ್ಬ ಬಡಕಲು ಮುದುಕನು ಒಳಗೆ ಬಂದನು. ಅದು ಕಟು ಚಳಿಗಾಲವಾಗಿದ್ದುದರಿಂದ ನಿಜಕ್ಕೂ ಅವನಿಗೆ ಅಂತಹ ಒಂದು ಬಟ್ಟೆಯ ಅವಶ್ಯಕತೆಯಿತ್ತು! ಹೊರಗೆ ಎಲ್ಲವೂ ಬರ್ಫ ಮತ್ತು ಹಿಮದಿಂದ ಮುಚ್ಚಲ್ಪಟ್ಟಿತ್ತು ಹಾಗೂ ಮೈ ಚರ್ಮವನ್ನು ಸೀಳಿಹಾಕುವಂತಹ ಕಟು ಚಳಿಗಾಳಿ ಬೀಸುತ್ತಿತ್ತು.

ಮಗುವು ಸ್ವಲ್ಪ ಸಮಯಕ್ಕೆ ಕಣ್ಣು ಮುಚ್ಚಿ ನಿದ್ರಿಸಲು, ಮುದುಕನು ಚಳಿಯಲ್ಲಿ ನಡುಗುವುದನ್ನು ನೋಡಿದ ಆ ತಾಯಿ, ಎದ್ದು ಅವನಿಗೆಂದು ಒಂದು ಚಿಕ್ಕ ವಾಟಿಯಲ್ಲಿ ಬಿಯರನ್ನು ಹೊಯ್ದು, ಬಿಸಿ ಮಾಡಲು ಒಲೆಯ ಮೇಲಿಟ್ಟಳು. ಮುದುಕನು ಮಗುವಿನ ತೊಟ್ಟಿಲ ಬಳಿ ಕುಳಿತು ಅದನ್ನು ಮೆಲ್ಲನೆ ಆಡಿಸಿದನು. ಆ ತಾಯಿ ಅವನ ಬಳಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತು, ಇನ್ನೂ ದೀರ್ಘ ಉಸಿರೆಳೆಯುತ್ತಿದ್ದ ಮಗುವನ್ನು ನೋಡುತ್ತ, ಅದರ ಪುಟ್ಟ ಕೈಯನ್ನು ಹಿಡಿದುಕೊಂಡಳು.

“ನಾನು ಇವನನ್ನು ಉಳಿಸಿಕೊಳ್ಳುವೆನು ಎಂದು ನಿಮಗನಿಸುತ್ತದೆಯಲ್ವೆ?” ಅವಳು ಕೇಳಿದಳು. “ನಿಜಕ್ಕೂ ನಮ್ಮ ದೇವರು ಇವನನ್ನು ನನ್ನಿಂದ ಕಸಿದುಕೊಳ್ಳುವುದಿಲ್ಲ!”

ಆ ಮುದುಕನು–ನಿಜದಲ್ಲಿ ಸ್ವತಃ ತಾನೇ ಸಾವು ಆಗಿದ್ದು, ತನ್ನ ತಲೆಯನ್ನು ಹೌದು ಅಥವಾ ಇಲ್ಲ – ಎಂದು ಯಾವುದೇ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದ ವಿಚಿತ್ರ ಶೈಲಿಯಲ್ಲಿ ಆಡಿಸಿದನು. ಆ ತಾಯಿ ತನ್ನ ತಲೆಯನ್ನು ಬಗ್ಗಿಸಿ, ತನ್ನ ಮಡಿಲನ್ನು ನೋಡಿದಳು. ಅವಳ ಕೆನ್ನೆಗಳ ಮೇಲೆ ಕಂಬನಿ ಹರಿಯಿತು. ಮೂರು ದಿನ ಮತ್ತು ಮೂರು ರಾತ್ರಿಗಳಿಂದ ಅವಳು ನಿದ್ರೆ ಮಾಡದ ಕಾರಣ, ಅವಳ ತಲೆ ಬಹಳ ಭಾರವಾಗಿ ಕೇವಲ ಒಂದು ನಿಮಿಷಕ್ಕೆ ನಿದ್ರೆ ಹೋದಳು.

ಚಳಿಯಿಂದ ನಡುಗುತ್ತ ಎಚ್ಚರಗೊಂಡ ಅವಳು, “ಏನಿದು?” ಎಂದೇಳುತ್ತಾ ಕೋಣೆಯ ಸುತ್ತಮುತ್ತ ನೋಡಿದಳು. ಆ ಮುದುಕನು ಮನೆಯಲ್ಲಿ ಇರಲಿಲ್ಲ, ಹೊರಟುಹೋಗಿದ್ದನು ಹಾಗೂ ಅವಳ ಮಗು—-ಅದು ಕೂಡ ಕಾಣೆಯಾಗಿತ್ತು-ಆ ಮುದುಕನು ಮಗುವನ್ನು ತನ್ನೊಂದಿಗೆ ಎತ್ತೊಯ್ದಿದ್ದನು. ಕೋಣೆಯ ಮೂಲೆಯಲ್ಲಿದ್ದ ಗಡಿಯಾರವು ಬಡಿಯಿತು. ಅದರ ಭಾರ-ಸರಪಳಿಯು ಕಳಚಿಕ್ಕೊಳ್ಳಲು, ಭಾರವಾದ ಆ ಗಡಿಯಾರವು ನೆಲದ ಮೇಲೆ ಬಿದ್ದಿತು, ದಢ್! ನಂತರ ಗಡಿಯಾರವೂ ನಿಂತು ಹೋಯಿತು.

ಆದರೆ ಆ ಬಡಪಾಯಿ ತಾಯಿ ಮನೆಯಿಂದ ಹೊರಗೆ ಓಡಿಬಂದು ತನ್ನ ಮಗುವಿಗಾಗಿ ಜೋರಾಗಿ ಅಳಲಾರಂಭಿಸಿದಳು.

ಹೊರಗೆ ಹಿಮದಲ್ಲಿ, ನೀಳವಾದ ಕಪ್ಪು ವಸ್ತ್ರಗಳನ್ನು ಧರಿಸಿದ ಒಬ್ಬ ಹೆಂಗಸು ಕುಳಿತಿದ್ದಳು ಮತ್ತು ಅವಳು ಆ ತಾಯಿಯನ್ನು ನೋಡಿ ಹೇಳಿದಳು, “ಸಾವು ನಿನ್ನೊಂದಿಗೆ ನಿನ್ನ ಮನೆಯಲ್ಲಿತ್ತು. ಅವನು ನಿನ್ನ ಮಗುವನ್ನು ಬಿರುಸಾಗಿ ಎತ್ತೊಯ್ಯುವುದನ್ನು ನಾನು ನೋಡಿದೆ. ಅವನು ಗಾಳಿಗಿಂತ ವೇಗವಾಗಿ ಚಲಿಸುತ್ತಾನೆ ಮತ್ತು ಅವನು ತನ್ನೊಂದಿಗೆ ತೆಗೆದುಕೊಂಡು ಹೋಗುವುದನ್ನು ತಿರುಗಿ ತರುವುದಿಲ್ಲ!”

“ಓ, ಅವನು ಯಾವ ಮಾರ್ಗದಲ್ಲಿ ಹೋದನೆಂದು ಮಾತ್ರ ನನಗೆ ಹೇಳು!” ತಾಯಿಯು ಕೇಳಿದಳು. “ಅವನು ಹೋದ ದಾರಿಯನ್ನು ಮಾತ್ರ ನನಗೆ ತಿಳಿಸು, ನಾನು ಅವನನ್ನು ಹುಡುಕಿಕೊಳ್ಳುತ್ತೇನೆ!”

“ನನಗೆ ಆ ದಾರಿ ಗೊತ್ತಿದೆ!” ಕಪ್ಪು ವಸ್ತ್ರಗಳಲ್ಲಿದ್ದ ಆ ಹೆಂಗಸು ಹೇಳಿದಳು, “ಆದರೆ ನಾನದನ್ನು ಹೇಳುವ ಮುನ್ನ, ಮೊದಲು ನೀನು ನನಗಾಗಿ, ನಿನ್ನ ಮಗುವಿಗೆ ಹಾಡುತ್ತಿದ್ದ ಎಲ್ಲಾ ಹಾಡುಗಳನ್ನು ಹಾಡು! ನನಗೆ ಆ ಹಾಡುಗಳೆಂದರೆ ಬಹಳ ಇಷ್ಟ. ಈ ಮುಂಚೆಯೇ ಅವುಗಳನ್ನು ಕೇಳಿದ್ದೇನೆ; ನಾನು ’ರಾತ್ರಿ’; ನೀನಾಡುವಾಗ ನಿನ್ನ ಕಣ್ಣುಗಳಿಂದ ಕಂಬನಿ ಸುರಿಯುವುದನ್ನೂ ನಾನು ನೋಡಿದ್ದೇನೆ!”

“ನಾನು ನಿನಗಾಗಿ ಎಲ್ಲಾ, ಎಲ್ಲಾ ಹಾಡುಗಳನ್ನು ಹಾಡುತ್ತೇನೆ!” ತಾಯಿ ಹೇಳಿದಳು, “ಆದರೆ ದಯವಿಟ್ಟು ನೀನೀಗ ನನ್ನನ್ನು ತಡೆಯಬೇಡ —- ನಾನು ಅವನನ್ನು ಹಿಮ್ಮೆಟ್ಟಿ—-ನನ್ನ ಮಗುವನ್ನು ಪಡೆದುಕೊಳ್ಳಬೇಕಾಗಿದೆ!”

ಆದರೆ ರಾತ್ರಿ ಮೌನವಾಗಿ ಕಲ್ಲಂತೆ ಕುಳಿತಳು. ನಂತರ ಆ ತಾಯಿ ಅಳುತ್ತಾ, ತನ್ನ ಕೈಗಳನ್ನು ಹಿಂಡುತ್ತಾ ಹಾಡತೊಡಗಿದಳು, ಅನೇಕ ಹಾಡುಗಳನ್ನು ಹಾಡಿದಳು ಮತ್ತು ಅವಳ ಕಂಬನಿ ಅದಕ್ಕಿಂತ ಹೆಚ್ಚಾಗಿತ್ತು; ನಂತರ ರಾತ್ರಿ ಹೇಳಿದಳು, “ಬಲಕ್ಕೆ, ದಟ್ಟನೆಯ ದೇವದಾರು ಮರಗಳ ಕಾಡಿನೊಳಗೆ ಹೋಗು, ಸಾವು ನಿನ್ನ ಪುಟ್ಟ ಮಗುವಿನೊಂದಿಗೆ ಆ ಮಾರ್ಗದಲ್ಲಿ ಹೋಗುವುದನ್ನು ನಾನು ನೋಡಿದೆ!”

ಕಾಡಿನೊಳಗೆ ರಸ್ತೆಯು ಎರಡಾಗಿ ವಿಂಗಡಗೊಂಡ ಸ್ಥಳಕ್ಕೆ ಬಂದು ಸೇರಿದ ಆ ತಾಯಿಗೆ, ಅಲ್ಲಿಂದ ಮುಂದಕ್ಕೆ ಯಾವಕಡೆಗೆ ತಿರುವು ತೆಗೆದುಕೊಳ್ಳಬೇಕೆಂದು ತಿಳಿಯಲಿಲ್ಲ. ಅಲ್ಲಿಯೇ ಪಕ್ಕದಲ್ಲಿ ಒಂದು ಮುಳ್ಳಿನ ಪೊದರುಗಿಡವಿತ್ತು. ಚಳಿಗಾಲವಾಗಿದ್ದುದರಿಂದ ಅದಕ್ಕೆ ಎಲೆಗಳೂ ಇರಲಿಲ್ಲ, ಹೂವೂ ಇರಲಿಲ್ಲ ಮತ್ತು ಅದರ ಕೊಂಬೆಗಳಲ್ಲಿ ಬರ್ಫಿನ ತುಂಡುಗಳು ತೂಗುತ್ತಲಿತ್ತು.

“ಸಾವು ನನ್ನ ಪುಟ್ಟ ಮಗುವಿನೊಂದಿಗೆ ಈ ಮಾರ್ಗದಲ್ಲಿ ಹೋಗುವುದನ್ನು ನೀನು ನೋಡಿದೆಯಾ?” ತಾಯಿಯು ಕೇಳಿದಳು.

“ಹೌದು,” ಉತ್ತರ ನೀಡಿತು ಮುಳ್ಳಿನ ಗಿಡ; “ನಾನು ಚಳಿಯಿಂದ ಮಂಜುಗಡ್ಡೆಯಾಗಿ ಸಾಯುವಂತಾಗಿದ್ದೇನೆ. ನೀನು ನನ್ನನ್ನು ಎದೆಗಪ್ಪಿ ಬೆಚ್ಚಗಾಗಿಸುವವರೆಗೆ, ಅವನು ಯಾವ ದಾರಿಯಲ್ಲಿ ಹೋದನೆಂದು ನಾನು ನಿನಗೆ ಹೇಳಲಾರೆ.”

ಆಗ ಅವಳು ಆ ಮುಳ್ಳುಗಿಡವನ್ನು ಅದಕ್ಕೆ ಬೆಚ್ಚಗಾಗುವಂತೆ ತನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡಳು. ಗಿಡದಲ್ಲಿದ್ದ ಮುಳ್ಳು ಅವಳನ್ನು ಚುಚ್ಚಿ, ಅವಳ ಮಾಂಸವನ್ನು ಸೀಳಿತು. ಅಧಿಕ ರಕ್ತವು ಸುರಿಯಿತು. ಆದರೆ ಆ ಮುಳ್ಳು ಗಿಡದಿಂದ ಹಸಿರೆಳೆಗಳು ಚಿಗುರಿದವು ಮತ್ತು ಅದರಿಂದ ಆ ಚಳಿಯಾದ ರತ್ರಿಯಲ್ಲಿ ಹೂವುಗಳು ಅರಳಿದವು. ಅದನ್ನು ನೋಡಿದ ಆ ದುಃಖತಪ್ತ ತಾಯಿಯ ಹೃದಯವೂ ಬೆಚ್ಚಗಾಯ್ತು. ನಂತರ ಅವಳು ಹೋಗಬೇಕಾದ ದಾರಿಯನ್ನು ಆ ಮುಳ್ಳಿನ ಪೊದರುಗಿಡ ಅವಳಿಗೆ ತಿಳಿಸಿತು.

ನಂತರ ಅವಳು ಒಂದು ದೊಡ್ಡ ಕೆರೆಯ ಬಳಿ ಬಂದಳು. ಅದರ ದಡದಲ್ಲಿ ಯಾವ ಹಡಗೋ ಅಥವಾ ದೊಣಿಯೋ ಕಾಣಿಸಲಿಲ್ಲ. ಅವಳು ನಡೆದು ಹೋಗಲು ಸಾಧ್ಯವಾಗುವಂತೆ ಅದು ಚಳಿಗೆ ಗಡ್ಡೆಯಾಗಿರಲೂ ಇಲ್ಲ ಹಾಗು ಅವಳದನ್ನು ದಾಟಿ ಹೋಗಲು ಸಾಧ್ಯವಾಗುವಂತೆ ಅದು ತೆರೆದ ನೀರಾಗಿಯೂ ಇರಲಿಲ್ಲ. ಆದರೂ ಅವಳ ಮಗುವನ್ನು ಕಂಡು ಹಿಡುಯಬೇಕೆಂದರೆ, ಅವಳು ಕೆರೆಯನ್ನು ದಾಟಲೇ ಬೇಕಿತ್ತು. ಆಗ ಅವಳು ಕುಳಿತು ಕೆರೆಯ ನೀರನ್ನೆಲ್ಲಾ ಕುಡಿದು ಬಿಡಲು ಪ್ರಯತ್ನಿಸಿದಳು. ಒಬ್ಬ ಮಾನವನಿಂದ ಅದು ಹೇಗೆ ಸಾಧ್ಯವಾದೀತು? ಆದರೆ ದುಃಖದಿಂದ ತುಂಬಿದ್ದ ಆ ತಾಯಿ ಯಾವುದಾದರೊಂದು ಚಮತ್ಕಾರವಾಗಬಹುದೆಂದೆನಿಸಿದಳು.

“ನಿನ್ನೀ ಪ್ರಯತ್ನದಲ್ಲಿ ಖಂಡಿತ ನೀನು ಜಯಗಳಿಸುವುದಿಲ್ಲ,” ಕೆರೆಯು ನುಡಿಯಿತು; “ನಾವಿಬ್ಬರು ಒಂದು ಒಪ್ಪಂದ ಮಾಡಿಕೊಳ್ಳೋಣ, ಅದುವೆ ಇಬ್ಬರಿಗೂ ಹಿತಕರವಾಗಿರುತ್ತದೆ. ನನಗೆ ಮುತ್ತುಗಳನ್ನು ಸಂಗ್ರಹಿಸುವುದು ಬಹಳ ಇಷ್ಟ ಮತ್ತು ನಾನೋಡಿರುವುದರಲ್ಲೆ ನಿನ್ನ ಕಣ್ಣುಗಳು ಅತ್ಯಂತ ಶುಭ್ರವಾಗಿವೆ. ನೀನು ಕಣ್ಣೀರಿಟ್ಟು ನಿನ್ನ ಕಣ್ಣುಗಳನ್ನು ಉದುರಿಸುವೆಯೆಂದರೆ, ನಾನು ಅವುಗಳನ್ನು ತೆಗೆದುಕೊಂಡು ನಿನ್ನನ್ನು ಸಾವು ವಾಸವಾಗಿರುವ ಆ ದೊಡ್ಡ ಹಸಿರುಮನೆಗೆ ಕರೆದೊಯ್ಯುವೆನು. ಅಲ್ಲಿ ಅವನು ಹೂಗಿಡಗಳು ಮತ್ತು ಮರಗಳನ್ನು ಬೆಳೆಸುತ್ತಿದ್ದಾನೆ. ಪ್ರತಿಯೊಂದು ಗಿಡ ಮತ್ತು ಮರವೂ ಮನುಷ್ಯ ಜೀವವೇ ಆಗಿರುತ್ತದೆ.”

“ಓ! ನನ್ನ ಮಗುವಿಗಾಗಿ ನಾನು ಏನನ್ನು ತಾನೇ ಕೊಡಲಾರೆ ಎನ್ನುವೆ!” ಅಳುತ್ತಿದ್ದ ತಾಯಿ ಹೇಳಿದಳು, ಮತ್ತವಳು ಇನ್ನೂ ಹೆಚ್ಚಾಗಿ ಅಳುತ್ತಿದ್ದಂತೆ ಅವಳ ಕಣ್ಣುಗಳು ಕೆರೆಯೊಳಗೆ ಬಿದ್ದು, ಆಳದಲ್ಲಿ ಮುಳುಗಲು, ಅವು ಎರಡು ಅಮೂಲ್ಯ ಮುತ್ತುಗಳಾದವು. ಆಮೇಲೆ ಕೆರೆಯು ಅವಳನ್ನು ತನ್ನ ಅಬ್ಬರಿಸುವ ಅಲೆಗಳಿಂದೆತ್ತಿ ಉಯ್ಯಾಲೆಯಲ್ಲಿಟ್ಟು ಬೀಸುವಂತೆ ಆಚೆದಡಕ್ಕೆ ಎಸೆಯಿತು. ಅಲ್ಲಿ ಒಂದು ಅದ್ಭುತವಾದ ಬಹಳ ಮೈಲಿಗಳಷ್ಟು ವಿಸ್ತಾರವಾದ ಕಟ್ಟಡವಿತ್ತು. ಅದು ಕಾಡುಗಳು ಮತ್ತು ಗುಹೆಗಳಿಂದ ಮುಚ್ಚಲ್ಪಟ್ಟ ಬೆಟ್ಟವೋ ಅಥವಾ ಅದೊಂದು ಕಟ್ಟಡವೋ ಎಂದು ಯಾರಿಂದಲೂ ಊಹಿಸಲಾಗದಂತಿತ್ತು. ಆದರೆ ಅವುಗಳೆಲ್ಲ ಆ ಬಡಪಾಯಿ ತಾಯಿಗೆ ಹೇಗೆ ಕಾಣಿಸುವುದು, ಅವಳು ಅತ್ತು ಅತ್ತು ತನ್ನ ಕಣ್ಣುಗಳನ್ನು ಕೆರೆಗೆ ಸುರಿದಿದ್ದಳಲ್ಲ.

“ನನ್ನ ಮಗುವನ್ನು ತೆಗೆದೊಯ್ದ ಸಾವನ್ನು ನಾನೆಲ್ಲಿ ಕಂಡು ಹಿಡಿಯುವೆ?” ಅವಳು ಕೇಳಿದಳು.

“ಅವನಿನ್ನು ಇಲ್ಲಿಗೆ ಬಂದಿಲ್ಲ!” ಸಾವಿನ ಆ ದೊಡ್ಡ ಹಸಿರುಮನೆಯನ್ನು ನೋಡಿಕೊಳ್ಳುವುದಕ್ಕೆ ನೇಮಿಸಲ್ಪಟ್ಟಿದ್ದ ಒಬ್ಬ ಮುದುಕಿಯು ಹೇಳಿದಳು, “ನೀನು ಇಲ್ಲಿಯ ದಾರಿಯನ್ನು ಹೇಗೆ ಕಂಡುಹಿಡಿದೆ?” ನಿನಗೆ ಯಾರು ಸಹಾಯ ಮಾಡಿದರು?”

“ನಮ್ಮ ದೇವರು ನನಗೆ ಸಹಾಯ ಮಾಡಿದನು,” ಅವಳು ಉತ್ತರ ಕೊಟ್ಟಳು “ಆತನು ಕರುಣಾಮಯಿಯಾಗಿದ್ದಾನೆ ಹಾಗೂ ನೀನು ಕೂಡ ಕರುಣೆಯುಳ್ಳವಳಾಗಿರುವೆ! ನಾನು ನನ್ನ ಮಗುವನ್ನೆಲ್ಲಿ ಕಾಣಬಹುದು?”

“ಇಲ್ಲ, ನನಗೆ ಗೊತ್ತಿಲ್ಲ,” ಮುದುಕಿಯು ನುಡಿದಳು “ಮತ್ತು ನಿನಗೆ ಕಣ್ಣು ಕಾಣುವುದಿಲ್ಲ! ಅನೇಕ ಹೂಗಳು ಹಾಗು ಮರಗಳು ಈ ರಾತ್ರಿ ಬಾಡಿಹೋಗಿವೆ, ಶೀಘ್ರವೇ ಸಾವು ಬಂದು ಅವುಗಳನ್ನು ಬದಲಾಯಿಸುತ್ತಾನೆ! ಪ್ರತಿಯೊಬ್ಬ ಮಾನವನಿಗೆ ಒಂದು ಜೀವ ವೃಕ್ಷ ಅಥವ ಜೀವ ಹೂವು ಇರುತ್ತದೆಯೆಂದು ನೀನು ಬಲ್ಲೆ. ಅವು ಅವರಿಗಾಗಿ ಪ್ರತ್ಯೇಕಿಸಲ್ಪಟ್ಟಿರುತ್ತದೆ. ನೋಡಲಿಕ್ಕೆ ಸಾಧಾರಣ ಗಿಡಗಳಂತೆಯೆ ಕಂಡರೂ ಅವುಗಳಿಗೆ ತಮ್ಮದೇ ಆದ ಹೃದಯ ಬಡಿತವಿರುತ್ತದೆ. ಮಕ್ಕಳ ಹೃದಯವೂ ಬಡಿಯುತ್ತಿರುತ್ತದೆ. ಅವುಗಳನ್ನು ನೀನು ಗಮನಿಸಿದರೆ ಬಹುಶ: ನೀನು ನಿನ್ನ ಮಗುವಿನದ್ದನ್ನು ಗುರುತಿಸಬಹುದು. ಇನ್ನು ಹೆಚ್ಚಾಗಿ ಏನೇನು ಮಾಡಬೇಕೆಂದು ನಾನು ನಿನಗೆ ಹೇಳುವೆ, ಆದರೆ ಬದಲಿಗೆ ನೀನು ನನಗೆ ಏನು ಕೊಡುವೆ?”

“ನನ್ನ ಬಳಿ ನಿನಗೆ ಕೊಡಲು ಏನೂ ಇಲ್ಲ,” ದುಃಖಭರಿತ ಆ ತಾಯಿ ನುಡಿದಳು, “ಆದರೆ ನಿನಗಾಗಿ ನಾನು ಭೂಮಿಯ ಕಡೆಯ ತನಕ ಹೋಗಬಲ್ಲೆ!”

“ಅಲ್ಲಿ ನನಗೆ ಆಗಬೇಕಾದದ್ದೇನೂ ಇಲ್ಲ!” ಮುದುಕಿ ನುಡಿದಳು. “ಆದರೆ ನೀನು ನನಗೆ ನಿನ್ನ ಉದ್ದನೆಯ ಕಪ್ಪು ಕೂದಲನ್ನು ನೀಡಬಲ್ಲೆ. ನಿನಗೆ ಗೊತ್ತಿರುವಂತೆ ಅದು ಬಹಳ ಸುಂದರವಾಗಿದೆ ಹಾಗೂ ನನಗೆ ಇಷ್ಟವಾಗಿದೆ! ಅದಕ್ಕೆ ಬದಲಾಗಿ ನನ್ನ ಬಿಳಿ ಕೂದಲನ್ನು ನೀನು ತೆಗೆದುಕೊಳ್ಳಬಹುದು.”

“ಇದನ್ನು ಬಿಟ್ಟು ಬೇರೇನ್ನನ್ನಾದರೂ ಕೇಳುವೆಯಾ?” ಅವಳು ಹೇಳಿದಳು “ನಾನದನ್ನೂ ಸಂತೋಷದಿಂದ ನಿನಗೆ ನೀಡುವೆ!” ಎಂದು ಹೇಳಿ ಅವಳು ತನ್ನ ಸುಂದರವಾದ ಕಪ್ಪು ಕೂದಲನ್ನು ಕೊಟ್ಟು ಬದಲಿಗೆ ಮುದುಕಿಯ ಬಿಳಿ ಕೂದಲನ್ನು ಪಡೆದುಕೊಂಡಳು.

ಆಮೇಲೆ ಅವರಿಬ್ಬರು ಗಿಡಗಳೂ, ಮರಗಳೂ ಬಹಳ ಅದ್ಭುತ ಸಮಾಗಮದಲ್ಲಿ ಬೆಳೆದಿದ್ದ ಸಾವಿನ ದೊಡ್ಡ ಹಸಿರು ಮನೆಯೊಳಗೆ ಹೋದರು. ಅಲ್ಲಿ ಕೊಳವಿಯೊಳಗೆ ಸೊಗಸಾಗಿ ಅರಳುತ್ತಿರುವ ಹಾಯ್ಸಿಂಥ್ ಪುಷ್ಪಗಳು ಹಾಗು ಬಲಿಷ್ಟ ಕಾಂಡದೊಂದಿಗೆ ಮರಗಳಂತೆ ಬೆಳೆದುನಿಂತ ಪ್ಯೂನಿ ಸಸ್ಯಗಳಿದ್ದವು. ಅಲ್ಲಿ ಜಲಸಸ್ಯಗಳು ಇದ್ದವು. ಅವುಗಳಲ್ಲಿ ಕೆಲವು ತಾಜಾವಾಗಿ ಇದ್ದವು, ಕೆಲವು ನೋಡಲಿಕ್ಕೆ ಸ್ವಲ್ಪ ಬಡಕಲಾಗಿ ಕಂಡವು. ಅವುಗಳನ್ನು ನೀರಹಾವುಗಳು ಸುತ್ತಿಕೊಂಡಿದ್ದವು ಮತ್ತು ಅವುಗಳ ದಂಡನ್ನು ಕಪ್ಪು ಚೇಳುಗಳು ಕಚ್ಚಿಕೊಂಡಿದ್ದವು. ಅದನ್ನು ದಾಟಿ ಹೋದಾಗ ಅಲ್ಲಿ ಕೆಲವು ಉನ್ನತವಾದ ತಾಳೆ, ಓಕ್ ಮತ್ತು ಬಾಳೆ ಮರಗಳು ಎತ್ತರವಾಗಿ ಬೆಳೆದು ನಿಂತಿರಲು, ಅವುಗಳ ಬಳಿ ಪಾರ್ಸ್ಲಿ ಮತ್ತು ಅರಳುತ್ತಿದ್ದ ಥೈಮ್ ಗಿಡಗಳು ನಳನಳಿಸುತ್ತಿದ್ದವು. ಪ್ರತಿಯೊಂದು ಗಿಡ ಮತ್ತು ಹೂಗಳಿಗೂ ಪ್ರತ್ಯೇಕ ಹೆಸರಿತ್ತು, ಪ್ರತಿಯೊಂದೂ ಒಂದೊಂದು ಮನುಷ್ಯ ಜೀವವನ್ನು ಪ್ರತಿನಿಧಿಸುತ್ತಿತ್ತು ಹಾಗೂ ಅವು ಇನ್ನೂ ಬದುಕ್ಕಿದ್ದವರಿಗೆ ಸೇರಿದ್ದವಾಗಿದ್ದವು–ಚೀನಾದಲ್ಲಿ ಕೆಲವರು, ಗ್ರೀನ್‍ಲ್ಯಾಂಡಿನಲ್ಲಿ ಇನ್ನೂ ಕೆಲವರು–ಭೂಮಿಯ ಎಲ್ಲಾ ಭಾಗಗಳಲ್ಲೂ ಇರುವವರನ್ನು ಅವು ಪ್ರತಿನಿಧಿಸುತ್ತಿದ್ದವು. ಕೆಲವು ದೊಡ್ಡ ಮರಗಳು ಚಿಕ್ಕ ಮಡಿಕೆಗಳಲ್ಲಿಡಲ್ಪಟ್ಟಿದ್ದು, ಅವು ಮಡಿಕೆಗಳನ್ನು ಚೂರು ಚೂರಾಗಿ ಒಡೆದುಕೊಂಡು ಬೆಳೆಯುವಂತಿದ್ದವು. ಅದೇ ಸಮಯದಲ್ಲಿ ಅನೇಕ ಬಲಹೀನವಾದ ಹೂಗಳು ಫಲವತ್ತಾದ ಮಣ್ಣಲ್ಲಿ ಬೆಳೆಯುತ್ತಿದ್ದವು. ಅವುಗಳ ಸುತ್ತ ಪಾಚಿಗಳು ಸುತ್ತಿಕೊಂಡಿರಲು ಅವುಗಳನ್ನು ಬಹು ಜಾಗರೂಕತೆಯಿಂದ ಬೆಳೆಸಿ ಕಾಯಲ್ಪಡಲಾಗಿತ್ತು. ವ್ಯಥೆಯಲ್ಲಿದ್ದ ಆ ತಾಯಿ ಎಲ್ಲಾ ಪುಟ್ಟ ಗಿಡಗಳ ಬಳಿ ಬಗ್ಗಿ ಆಲಿಸಲು, ಪ್ರತಿಯೊಂದು ಹೂಗಳಲ್ಲು ಮಾನವ ಹೃದಯ ಬಡಿತವು ಕೇಳಿಸಿತು. ಕೊನೆಗೂ ಆ ಲಕ್ಷ ಲಕ್ಷ ಹೃದಯ ಬಡಿತಗಳಲ್ಲಿ ತನ್ನ ಮಗುವಿನ ಹೃದಯ ಬಡಿತವನ್ನು ಆಕೆ ಗುರುತಿಸಿದಳು.

“ಇದೇ ಅದು!” ತನ್ನ ಅನಾರೋಗ್ಯ ತಲೆಯನ್ನು ಕೆಳಗೆ ಬಾಗಿದ್ದ ಒಂದು ಕೇಸರಿ ಹೂವ ಕಡೆಗೆ ತನ್ನ ಕರಗಳನ್ನು ತೋರಿ, ಅವಳು ಜೋರಾಗಿ ಕೂಗಿ ಹೇಳಿದಳು.

“ಹೂವನ್ನು ಮುಟ್ಟಬೇಡ!” ಆ ಮುದುಕಿ ಉದ್ಗರಿಸಿದಳು. “ಆದರೆ ನೀನು ಇಲ್ಲೇ ಇದ್ದು, ಸಾವು ಬಂದ ಕೂಡಲೆ – ಅವನಿನ್ನೇನು ಬಂದುಬಿಡುವನು ಎಂದೆನಗನಿಸುತ್ತದೆ – ನೀನು ಅವನನ್ನು ಹೂವನ್ನು ಕೀಳಲು ಬಿಡಬೇಡ. ಆದರೆ ಅವನು ಹಾಗೆ ಮಾಡಿದರೆ, ನೀನು ಕೂಡ ಅದೇ ರೀತಿ ಮತ್ತೆಲ್ಲಾ ಗಿಡಗಳಿಗೆ ಮಾಡುವದಾಗಿ ಅವನನ್ನು ಬೆದರಿಸು. ಇದರಿಂದ ಅವನಿಗೆ ಭಯವುಂಟಾಗುತ್ತದೆ! ಯಾಕೆಂದರೆ ಅವನು ನಮ್ಮ ದೇವರಿಗೆ ಪ್ರತಿಯೋಂದು ಗಿಡದ ಬಗ್ಗೆಯೂ ಲೆಕ್ಕ ಕೊಡಬೇಕು. ಯಾವುದೇ ಒಂದು ಗಿಡವೂ ಆತನ ಅನುಮತಿಯಿಲ್ಲದೆ ಕೀಳಲಾಗುವುದಿಲ್ಲ.

ಆ ಹೊತ್ತು ಆ ದೊಡ್ಡ ಆವರಣದಿಂದ ಒಂದು ಹಿಬ್ಬನಿಯ ತಣ್ಣನೆಯ ಚಳಿಯು ಮುನ್ನುಗ್ಗಿ ಪ್ರವೇಶಿಸಿತು. ಸಾವು ಬಂದನೆಂದು ಆ ಕುರುಡು ತಾಯಿಗೆ ಅರ್ಥವಾಯಿತು.

“ನಿನಗೇಗೆ ಇಲ್ಲಿನ ದಾರಿ ಗೊತ್ತಾಯಿತು?” ಅವನು ಕೇಳಿದನು, “ನೀನು ಹೇಗೆ ನನಗಿಂತ ಮುಂಚೆ ಇಲ್ಲಿಗೆ ಬಂದೆ?”

“ನಾನೊಬ್ಬ ತಾಯಿ,” ಅವಳು ಉತ್ತರಿಸಿದಳು.

ಆ ನಾಜೂಕಾದ ಪುಟ್ಟ ಹೂವಿನ ಕಡೆಗೆ ಸಾವು ತನ್ನ ದೊಡ್ಡ ಕೈಗಳನ್ನು ಚಾಚಲು, ಆ ತಾಯಿ ಅದರ ಸುತ್ತ ತನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದಳು, ಅದೇ ಸಮಯದಲ್ಲಿ ಅದರ ಒಂದು ಎಲೆಯನ್ನಾದರು ತಾನೆಲ್ಲಿ ಮುಟ್ಟಿಬಿಡುವೆನೋವೆಂದು ಅವಳಿಗೆ ಭಯವುಂಟಾಯಿತು. ಆಗ ಸಾವು ಅವಳ ಕೈಗಳ ಮೇಲೆ ಜೋರಾಗಿ ಊದಲು, ಅವನ ಉಸಿರು ಅವಳಿಗೆ ಕಟು ಚಳಿಗಾಲದ ಗಾಳಿಗಿಂತಲೂ ತಣ್ಣಗೆ ಚುಚ್ಚಿತು, ಮತ್ತು ಅವಳ ಕೈಗಳು ಬಲಹೀನವಾಗಿ ಕೆಳೆಕ್ಕೆ ಬಿದ್ದಿತು.

” ನನಗೆದುರಾಗಿ ನಿನ್ನಿಂದ ಏನ್ನನ್ನು ಮಾಡಲಾಗುವುದಿಲ್ಲ!” ಸಾವು ಹೇಳಿತು.

“ಆದರೆ ನಮ್ಮ ಆ ದೇವರಿಂದ ಸಾಧ್ಯವಾಗುತ್ತದೆ!” ಆಕೆ ಹೇಳಿದಳು.

“ಆತನ ಆಜ್ಞೆಯನ್ನೇ ನಾನು ಪಾಲಿಸುತ್ತಿರುವುದು!” ಸಾವು ಉತ್ತರಿಸಿತು. “ನಾನು ಅವನ ತೋಟಗಾರನು. ನಾನು ಎಲ್ಲಾ ಹೂಗಳು ಮತ್ತು ಮರಗಳನ್ನು ತೆಗೆದು ಪರದೈಸಿಯಲ್ಲಿರುವ ಅಙ್ಞಾತ ಭೂಮಿಯಲ್ಲಿನ ದೊಡ್ಡ ತೋಟದಲ್ಲಿ ಪುನಃ ನಡುತ್ತೇನೆ. ಅದು ಅಲ್ಲಿ ಹೇಗೆ ಬೆಳೆಯುತ್ತದೆ ಮತ್ತು ಆ ತೋಟ ಹೇಗಿರುತ್ತದೆಯೆಂದು ನಾನು ನಿನಗೆ ಹೇಳಲಾಗುವುದಿಲ್ಲ.

“ನನ್ನ ಮಗುವನ್ನು ನನಗೆ ತಿರುಗಿ ಕೊಡು!” ಅಳುತ್ತಾ, ಕೂಗಾಡುತ್ತಾ ಆ ತಾಯಿ ಗೋಗರೆದಳು. ಹಾಗು ದಿಢೀರನೆ ತನ್ನ ಬಳಿಯಲ್ಲಿದ್ದ ಎರಡು ಹೂಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಸಾವನ್ನು ನೋಡಿ ಕೂಗಾಡುತ್ತಾ ಹೇಳಿದಳು, “ನಾನು ಹತಾಶಳಾಗಿರುವುದರಿಂದ ನಿನ್ನ ಎಲ್ಲಾ ಹೂಗಳನ್ನು ಹಾಳು ಮಾಡಿಬಿಡುತ್ತೇನೆ.”

“ಅವುಗಳನ್ನು ಮುಟ್ಟಬೇಡ!” ಸಾವು ನುಡಿಯಿತು ” ನೀನು ಬಹಳ ವ್ಯಥೆಯಲ್ಲಿರುವೆಯೆಂದು ನೀನೇಳುವೆ, ಹಾಗಿರುವಾಗ ನೀನು ಮತ್ತೊಬ್ಬ ತಾಯಿಯನ್ನು ನಿನ್ನಂತೆಯೆ ದುಃಖಕ್ಕೊಳಗಾಗುವಂತೆ ಮಾಡುವೆಯಾ?”

“ಮತ್ತೊಬ್ಬ ತಾಯಿ!” ಹೂಗಳನ್ನು ತನ್ನ ಕೈಗಳಿಂದ ಬಿಡಿಸುತ್ತ, ಆ ಬಡಪಾಯಿ ಹೆಂಗಸು ಹೇಳಿದಳು.

“ಇಗೋ, ನಿನ್ನ ಕಣ್ಣುಗಳು,” ಹೇಳಿತು ಸಾವು “ನಾನು ಅವುಗಳನ್ನು ಕೊಳದಿಂದ ಹಿಡಿದು ತಂದಿರುವೆ, ಅವುಗಳು ಬಹಳ ಪ್ರಕಾಶವಾಗಿ ಹೊಳೆಯುತ್ತಿದ್ದವು; ಆದರೆ ಅವು ನಿನ್ನವೆಯೆಂದು ನನಗೆ ತಿಳಿದಿರಲಿಲ್ಲ. ಇವುಗಳನ್ನು ನೀನು ಮತ್ತೆ ಪಡೆದುಕೊ, ಈಗ ಅವು ಮೊದಲಿಗಿಂತಲೂ ತಿಳಿಯಾಗಿವೆ – ನಿನ್ನ ದೃಷ್ಟಿಯನ್ನು ಪಡೆದುಕೊಂಡು ನಿನ್ನ ಹತ್ತಿರವಿರುವ ಈ ಆಳ ಭಾವಿಯೊಳಗೆ ನೋಡು. ನೀನು ಕೀಳಬೇಕೆಂದಿರುವ ಆ ಎರಡು ಹೂಗಳ ಹೆಸರುಗಳನ್ನು ನಾನು ನಿನಗೆ ಹೇಳುತ್ತೇನೆ. ನೀನು ಇನ್ನೇನು ಕೆಡವಿ ಹಾಳುಮಾಡಬೇಕೆಂದಿರುವ ಆ ಎರಡು ಹೂಗಳು ಪ್ರತಿನಿಧಿಸುವ ಮನುಷ್ಯರ ಇಡೀ ಭವಿಷ್ಯವನ್ನು —ಅವರ ಇಡೀ ಜೀವನವನ್ನು ನೀನೀಗ ನೋಡುವೆ.”

ಆಗ ಅವಳು ಆ ಭಾವಿಯೊಳಗೆ ನೋಡಿದಳು ಮತ್ತು ಅವರಿಬ್ಬರಲ್ಲಿ ಒಬ್ಬನು ಬೆಳೆದು ಹೇಗೆ ಪ್ರಪಂಚಕ್ಕೆ ಆಶೀರ್ವಾದವಾಗಿ ಆದನು ಹಾಗು ಅವನು ಹೇಗೆ ಸಂತೋಷ ಮತ್ತು ಖುಷಿಯನ್ನು ಜಗವೆಲ್ಲಾ ಹಬ್ಬಿದನೆಂದು ನೋಡಲಿಕ್ಕೆ ಬಹಳ ಸಂತಸಕರವಾಗಿತ್ತು. ಆದರೆ ಮತ್ತೊಬ್ಬನ ಬದುಕು ಚಿಂತೆ, ಬಡತನ, ಸಂಕಷ್ಟಗಳು ಮತ್ತು ದುಃಖದಿಂದ ತುಂಬಿರುವುದನ್ನೂ ನೋಡಿದಳು.

“ಎರಡೂ ದೇವರ ಚಿತ್ತವೇ ಆಗಿರುತ್ತದೆ!” ಸಾವು ಹೇಳಿತು.

“ಇವೆರಡರಲ್ಲಿ ಯಾವುದು ದುರದೃಷ್ಟದ ಹೂವು, ಯಾವುದು ಸಂತಸದ ಹೂವು?” ಅವಳು ಕೇಳಿದಳು.

“ನಾನದನ್ನು ನಿನಗೆ ಹೇಳಲಾಗುವುದಿಲ್ಲ,” ಸಾವು ಹೇಳಿತು; “ಆದರೆ ಒಂದನ್ನು ತಿಳಿದುಕೊ, ಆ ಎರಡು ಹೂಗಳಲ್ಲಿ ಒಂದು ನಿನ್ನ ಮಗುವನ್ನು ಪ್ರತಿನಿಧಿಸುತ್ತದೆ. ಈಗ ನೀನು ನೋಡಿದ್ದು ನಿನ್ನ ಮಗುವಿನ ವಿಧಿಯನ್ನು – ನಿನ್ನ ಸ್ವಂತ ಮಗುವಿನ ಭವಿಷ್ಯವನ್ನು!”
ಆಗ ಆ ತಾಯಿ ಭಯದಿಂದ ಜೋರಾಗಿ ಚೀರುತ್ತಾ, “ಇದರಲ್ಲಿ ಯಾವುದು ನನ್ನ ಮಗುವಿನದ್ದು? ನನಗೆ ಅದನ್ನು ಹೇಳು? ಮುಗ್ಧ ಮಗುವನ್ನು ಪಾರುಮಾಡು! ಆ ಎಲ್ಲಾ ಸಂಕಷ್ಟದಿಂದ ನನ್ನ ಮಗುವನ್ನು ಪಾರು ಮಾಡು! ಅದನ್ನು ತೆಗೆದುಕೊಂಡೊಯ್ಯುವದು ಒಳಿತು! ಅದನ್ನು ದೇವರ ರಾಜ್ಯಕ್ಕೆ ತೆಗೆದು ಕೊಂಡು ಹೋಗಿಬಿಡು! ನನ್ನ ಕಣ್ಣೀರನ್ನು ಮರೆತುಬಿಡು, ನನ್ನ ಬೇಡಿಕೆಗಳನ್ನು ಮರೆತುಬಿಡು ಮತ್ತು ನಾನು ಮಾಡಿದ್ದನ್ನೆಲ್ಲಾ ಮರೆತುಬಿಡು!

“ನನ್ನಿಂದ ನಿನ್ನನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ!” ಸಾವು ಹೇಳಿತು; “ನಿನಗೆ ನಿನ್ನ ಮಗುವು ವಾಪಸ್ಸು ಬೇಕೆ ಅಥವಾ ನಾನು ಅವನನ್ನು ದೂರ, ನೀನರಿಯದ ಜಾಗಕ್ಕೆ ಒಯ್ಯಲೆ?

ಆಗ ಆ ತಾಯಿ ತನ್ನ ಕೈಗಳನ್ನು ಮುದುರಿಕೊಂಡಳು, ಮೊನಕಾಲೂರಿದಳು, ಹಾಗು ದೇವರಲ್ಲಿ ಪ್ರಾರ್ಥಿಸಿದಳು. “ಓ, ದೇವರೇ, ನನ್ನನ್ನು ಆಲಿಸದಿರು! ಅತ್ಯುತ್ತಮವಾದ, ಅತೀ ಶ್ರೇಷ್ಟವಾದ ನಿನ್ನ ಚಿತ್ತಕ್ಕೆ ವಿರುದ್ಧವಾಗಿ, ನಾನು ಬೇಡುವಾಗ ನನ್ನನ್ನು ಆಲಿಸದಿರು! ನನ್ನನ್ನು ಆಲಿಸದಿರು! ”

ಮತ್ತವಳು ತನ್ನ ತಲೆಯನ್ನು ಕೆಳಗೆ ತನ್ನ ಮಡಿಲಿಗೆ ಬಾಗಿದಳು. ಆಗ ಸಾವು ಅವಳ ಮಗುವನ್ನು ತೆಗೆದುಕೊಂಡು ಅಙ್ಞಾತ ಲೋಕಕ್ಕೆ ಒಯ್ಯಿತು.

ನನ್ನ ಪ್ರೀತಿಯ ಹಲಸಿನಹಣ್ಣು -देवसुत

jackfruit.jpg?attredirects=0&d=1
ನನ್ನ ಪ್ರೀತಿಯ ಹಲಸಿನಹಣ್ಣು

ಹೊರಗಿನಿಂದ ಮುಳ್ಳು,
ಒಳಗಿಂದ ಮುದ್ದು

ನೋಡಲು ಕಹಿ,
ತಿಂದರೆ ಸಿಹಿ

ಇಷ್ಟು ದೊಡ್ಡದು,
ಬಿದ್ದರೆ ಢಮ್ಮು!

ನನ್ನ ಪ್ರೀತಿಯ ಹಲಸಿನಹಣ್ಣು ।
देवसुत

Photo By: –
Submitted by: देवसुत
Submitted on: Mon Oct 14 2013 09:20:38 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಅಡಿಕೆಗೆ ಹೋದ ಮಾನ… -Unknown

Kannada Quote:
ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ
Meaning:
It is like a lamp placed on a partitioning wall. Said of people who meddle but do not take sides

Kannada Quote:
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು
Meaning:
Reputation lost for a betel nut cannot be regained by donating an elephant

Kannada Quote:
ಅಜ್ಜಿಗೆ ಅರಿವೆ ಚಿಂತೆ ಮಗಳಿಗೆ ಮದುವೆಯ ಚಿಂತೆ

Meaning:
Grandma is worried about a piece of cloth to wear while the daughter is worried about her marriage. Said of people who are irresponsible towards their parents.

Photo By:
Submitted by: Unknown
Submitted on: Sun Feb 16 2014 17:56:14 GMT+0530 (IST)
Category: Ancient Wisdom
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಭುವನದ ಭಾಗ್ಯ ‘ಹೈಗುಂದ’ -Prabhakar Ishwar Hegde

svec12haigunda1.jpg
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ ಸೃಷ್ಟಿಸಿರುವ ಏಳು ದ್ವೀಪಗಳಲ್ಲಿ ಹೈಗುಂದ ಒಂದು. ಎರಡು ಸಾವಿರ ವರ್ಷಗಳಷ್ಟು ಪ್ರಾಚೀನ ಮೂರ್ತಿ ಶಿಲ್ಪಗಳು, ಅತ್ಯಂತ ಪ್ರಾಚೀನ ಇಟ್ಟಿಗೆಗಳು, ವಿಶಿಷ್ಟ ಬಣ್ಣ ಮತ್ತು ಸ್ವಾದಗಳಿರುವ ಬೆಲ್ಲ, ಸಹ್ಯಾದ್ರಿಯ ಬೆಟ್ಟಗುಡ್ಡಗಳ ಪರಿಸರ, ಶರಾವತಿಯ ಸರೋವರದಂಥ ಹರಹಿನ ನೀರು– ಈ ಎಲ್ಲ ಕಾರಣಗಳಿಂದ ‘ಹೈಗುಂದ’ ದ್ವೀಪ ವಿಶಿಷ್ಟವಾಗಿದೆ.

ಕಿರುಗುಡ್ಡದ ತಳದಲ್ಲಿ ವಿಸ್ತರಿಸಿದ ಗದ್ದೆಯಿಂದ ಹುಣ್ಣಿಮೆಯ ನಿತಾಂತ ಬೆಳದಿಂಗಳನ್ನು ಸವಿಯುವುದು ಇಲ್ಲಿ ಭುವನದ ಭಾಗ್ಯವೆಂಬಂಥ ಅನುಭವ. ಕನ್ನಡದ ಪ್ರಥಮ ರಾಜವಂಶವೆಂಬ ಖ್ಯಾತಿಯ ಕದಂಬರ ಪ್ರಥಮ ದೊರೆ ಮಯೂರವರ್ಮ, ತನ್ನ ನಾಡಿನಲ್ಲಿ ಯಜ್ಞ–ಯಾಗಗಳನ್ನು ನೆರವೇರಿಸಲೆಂದು ಉತ್ತರದಿಂದ ಕರೆತಂದು ಹೈಗುಂದದಲ್ಲಿ ನೆಲೆಗೊಳಿಸಿದ ಬ್ರಾಹ್ಮಣರೇ ಕಾಲಾಂತರದಲ್ಲಿ ಹವ್ಯ–ಕವ್ಯಗಳಿಂದಾಗಿ ಹವ್ಯಕರೆನಿಸಿದರೆಂಬುದು ಐತಿಹ್ಯ.

ಅದಕ್ಕೆ ಸಾಕ್ಷಿಯೆಂಬಂತೆ ಇಲ್ಲಿ ಹಲವು ಯಜ್ಞಕುಂಡಗಳ ಕುರುಹುಗಳಿವೆ. ಸಹಸ್ರಾರು ವರ್ಷಗಳ ಹಿಂದಿನ ಇಟ್ಟಿಗೆಗಳಿವೆ! ‘ಹವ್ಯ+ಕುಂಡ’ವೇ ಹೈಗುಂದ! ಹೈಗುಂದದಲ್ಲಿ ಗುಂದಗಳೇ (ದಿಬ್ಬ) ತುಂಬಿವೆ. ಅಲ್ಲೆಲ್ಲ ಸಹಸ್ರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತ ಭವ್ಯ ದೇವತಾ ಮೂರ್ತಿಗಳು, ಶಿವಲಿಂಗಗಳು, ಭಗ್ನ ಶಿಲಾವಶೇಷಗಳು ಹರಡಿದಂತಿವೆ.

ಅಚ್ಚರಿಯೆಂಬಂತೆ ಕರ್ನಾಟಕದಲ್ಲಿ ಬುದ್ಧ ಮೂರ್ತಿ ಇರುವ ವಿರಳ ತಾಣಗಳಲ್ಲಿ ಇದೂ ಒಂದು! ಪುರುಷಪ್ರಮಾಣದ ಇಲ್ಲಿನ ವಿಷ್ಣು ಶಿಲ್ಪ ಮತ್ತು ಯಕ್ಷ ಶಿಲ್ಪ (?) ತನ್ನ ಪ್ರಮಾಣ, ಆಕಾರ, ನಿಲುವು, ಭಂಗಿಗಳಿಂದ ಅತ್ಯಂತ ಭವ್ಯವೂ ಆಕರ್ಷಣೀಯವೂ ಆಗಿದೆ. ಹೈಗುಂದದ ಪ್ರಧಾನ ದೇವತೆ ಕದಂಬರಿಂದ ಸ್ಥಾಪಿತ ದುರ್ಗಾಂಬಿಕೆ.

ಆಕೆ ಶಾಸನಗಳಲ್ಲಿ ‘ಗುಂದದಬ್ಬೆ’– ಪೈವಗುಂದದ–ಹೈಗುಂದದ ಅಬ್ಬೆ– ಇಂದಿಗೂ ‘ಅಮ್ಮನೋರು’. ಅಲ್ಲಿಗೆ ಅಂದಿನ ಹವ್ಯಕರಿಂದ, ಹವ್ಯಕುಂಡಗಳಿಂದ ಹೈಗುಂದ ಎಂಬುದೂ ಗಟ್ಟಿ. ಹೈಗುಂದ ಮೊದಲು ದ್ವೀಪವಾಗಿರಲಿಲ್ಲ. ಉತ್ತರ ದಿಕ್ಕಿನ ಅಳ್ಳಂಕಿ ಗ್ರಾಮದೊಂದಿಗೆ ಕೂಡಿಕೊಂಡಿದ್ದ ಭೂಭಾಗವಾಗಿತ್ತು. ಮಯೂರವರ್ಮ ಯಜ್ಞಕಾರ್ಯಗಳಿಗೆ ದ್ವೀಪವಾಗಿ ಪರಿವರ್ತಿಸಿದ ಎಂಬುದು ಐತಿಹ್ಯ.

ಅದಕ್ಕೆ ಪೂರಕವಾಗಿ ಹಿಂದಿನ ಶತಮಾನದ ಉತ್ತರಾರ್ಧದಲ್ಲಿ ಬದುಕಿದ್ದ ಇಲ್ಲಿನ ಹಿರಿಯರು ಆ ಕಾಲದ ಕಾಲುವೆಯ ಆಚಿನ ಅಳ್ಳಂಕಿಯಿಂದ ಹೈಗುಂದದ ಆಲೆಮನೆಗೆ, ತಮ್ಮ ಬಾಲ್ಯದಲ್ಲಿ ಕಬ್ಬನ್ನು ಎಸೆಯುತ್ತಿದ್ದರು ಎಂಬುದಾಗಿ ಹೇಳುತ್ತಿದ್ದದ್ದನ್ನು ಈ ಕಾಲದ ಹಲವು ಹಿರಿಯರು ನೆನಪಿಸುತ್ತಾರೆ.

ಅದೂ ಖರೇ ಇರಬೇಕು! ಏಕೆಂದರೆ ಗಟ್ಟಿಯಲ್ಲದ, ಉಸುಕೇ ಪ್ರಧಾನವೆನಿಸಿದ ಹೈಗುಂದದ ಮಣ್ಣು, ಐವತ್ತರ ದಶಕದಲ್ಲಿ ಇಲ್ಲಿ ಸಂಚರಿಸುತ್ತಿದ್ದ ಮೋಟರ್‌ ಬೋಟಿನಿಂದಾಗಿ (ಲಾಂಚ್‌) ಮತ್ತು ಅದಕ್ಕೂ ಮುನ್ನ ವರ್ಷಂಪ್ರತಿ ಬರುತ್ತಿದ್ದ ನೆರೆಯಿಂದ ಹೊಳೆಗೆ ಕುಸಿಯುತ್ತ– ಹೊಳೆ ಅಗಲವಾಗುತ್ತ ಹೋದುದನ್ನು ಕಂಡವರು ಇದ್ದಾರೆ. ಹಾಗೆಯೇ ಇಲ್ಲಿನ ಹೊಳೆಯಲ್ಲಿ ಅಂದೆಲ್ಲ ಮಣಕ (ಮೊಸಳೆ)ಗಳೂ ಇದ್ದವೆಂದು ಆ ಕಾಲದ ಹಿರಿಯರು ಹೇಳುತ್ತಿದ್ದರು. ಆದರೆ ಅವು ಈಗಿಲ್ಲ.

ಹೈಗುಂದದ ವೈಶಿಷ್ಟ್ಯಗಳು ಹಲವು. ಇಲ್ಲಿನ ಮಣ್ಣಿನಲ್ಲಿ ಬೆಳೆವ ಕಬ್ಬಿನಿಂದ ತಯಾರಿಸಿದ ಬೆಲ್ಲ, ತನ್ನ ಸ್ವಾದ, ಬಣ್ಣ, ಬಾಳಿಕೆಗಳಿಂದ ಪ್ರಸಿದ್ಧ. ಬ್ರಿಟಿಷರ ಕಾಲದ ಶಾಲಾ ಪಠ್ಯಪುಸ್ತಕಗಳಲ್ಲೂ ಇದರ ಪ್ರಸಿದ್ಧಿಯ ಉಲ್ಲೇಖ ಇದೆ. ಊರಿನ ಎಲ್ಲೆಡೆ ಕಾಣುವ ಸಾವಿರಾರು ವರ್ಷಗಳ ಶಿಲಾಮೂರ್ತಿಗಳು ಗತಕಾಲದ ವೈಭವದ ಕುರುಹಾಗಿವೆ. ೧೯೭೫ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಡಾ. ಅ. ಸುಂದರ ಅವರು ಅವುಗಳ ಕಾಲ ನಿರ್ಣಯಿಸಿ, ಹೊರಜಗತ್ತಿಗೆ ಪರಿಚಯಿಸಿದ್ದರಿಂದ ಇಂದಿನ ಮಕ್ಕಳ ಶಾಲಾ ಪಠ್ಯಪುಸ್ತಕಗಳಲ್ಲೂ ಅವುಗಳ ಚಿತ್ರಸಹಿತ ಪ್ರಸ್ತಾಪ ಕಾಣಬಹುದು.

ಅಗೆದಲ್ಲೆಲ್ಲ ಯಾವುದಾದರೊಂದು ಅವಶೇಷ ಸಿಗುವ ಈ ನೆಲದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಅಡಗಿದೆ. ಉತ್ಖನನ ಆಗಬೇಕು; ಆಗ ಕರ್ನಾಟಕದ ಇತಿಹಾಸದ ಹಲವು ಕೊಂಡಿಗಳು ಬೆಳಕಿಗೆ ಬರಬಹುದು. ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಗೇರುಸೊಪ್ಪ–ಹೊನ್ನಾವರಗಳಿಂದ ಸಮದೂರದಲ್ಲಿ ಹೈಗುಂದ ದ್ವೀಪವಿದೆ.

ಹೈಗುಂದ ದ್ವೀಪಕ್ಕೆ ಇಂದೂ ದೋಣಿಯೇ ಸಂಪರ್ಕ ಸೇತು. ೨೦ ಕಿ.ಮೀ. ದೂರದ ಹೊನ್ನಾವರದಲ್ಲಿ ಸುಸಜ್ಜಿತ ವಸತಿಗೃಹಗಳಿವೆ. ಅಲ್ಲಿಂದ ನಾಡದೋಣಿ ಅಥವಾ ಮೋಟಾರ್‌ ಬೋಟುಗಳಿಂದ ನದೀ ಮಾರ್ಗದ ಪ್ರಯಾಣ ಸಂತಸ ತರಬಲ್ಲದು– ಹಗಲಿನಲ್ಲಿ, ಅಂತೆ ಬೆಳದಿಂಗಳಲ್ಲಿ!

-Prabhakar Ishwar Hegde

Photo By: Dr. B.L. Soujanya
Submitted by: Prabhakar Ishwar Hegde
Submitted on: Sun Jan 12 2014 20:39:19 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ನನ್ನ ಪ್ರೀತಿಯ ಹಲಸಿನಹಣ್ಣು -देवसुत

1373444544_526261114_1-Pictures-of--Jack-Fruit.jpg
ನನ್ನ ಪ್ರೀತಿಯ ಹಲಸಿನಹಣ್ಣು

ಹೊರಗಿನಿಂದ ಮುಳ್ಳು,
ಒಳಗಿಂದ ಮುದ್ದು

ನೋಡಲು ಕಹಿ,
ತಿಂದರೆ ಸಿಹಿ

ಇಷ್ಟು ದೊಡ್ಡದು,
ಬಿದ್ದರೆ ಢಮ್ಮು!

ನನ್ನ ಪ್ರೀತಿಯ ಹಲಸಿನಹಣ್ಣು ।
-देवसुत

Photo By: –
Submitted by: देवसुत
Submitted on: Mon Oct 14 2013 09:20:38 GMT+0530 (IST)
Category: Original
Language: ಕನ್ನಡ/Kannada
Copyright: A Billion Stories (http://www.abillionstories.com)
– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ತಾ ಕಳ್ಳ , ಪರರ ನ೦ಬ. -Chandrabhaga

Thief.jpg
ತಾ ಕಳ್ಳ , ಪರರ ನ೦ಬ.

English Translation of Havyaka Kannada Proverb:
Himself is a thief, but does not trust others.

Hindi Translation of Havyaka Kannada Proverb
खुद चोर है, पर दूसरों पर विश्वास नहीं

Photo By: –
Submitted by: Chandrabhaga
Submitted on: Mon Oct 14 2013 09:17:38 GMT+0530 (IST)
Category: Ancient Wisdom
Language: ಹವ್ಯಕ ಕನ್ನಡ/Havyaka Kannada
Copyright: Copy Free

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

ಕನ್ನಡ ಪ್ರೀತಿ -shilpamk

ಮತ್ತೆ ಅರಳಿತು ನನ್ನಲಿ ಕನ್ನಡದ ಪ್ರೀತಿ,
ಹೇಳಿಕೊಳ್ಳಲು ಇರುವದು ನನಗೆಂಥ ಭೀತಿ!
ಎಲ್ಲಡಗಿ ಕುಳಿತಿತ್ತು ಈ ನನ್ನ ಪ್ರೀತಿ,
ಬಹಿರಂಗವಾಯಿತು ಇಂದು ಈ ರೀತಿ!
ನನಗಿಲ್ಲ ಇನ್ನು ಯಾರ ಸ್ಮೃತಿ,
ಓ ಕನ್ನಡವೇ, ನೀನೇ ನನ್ನ ಅಧಿಪತಿ! ನೀನೇ ನನ್ನ ಅಧಿಪತಿ!
– -shilpamk

Photo By:
Submitted by: shilpamk
Submitted on: Thu Oct 03 2013 13:42:28 GMT+0530 (IST)
Category: Original
Language: ಕನ್ನಡ/Kannada
Copyright: A Billion Stories (http://www.abillionstories.com)
– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

Proverb Tue Jun 18 2013 15:51:28 GMT+0530 (IST) -diya

ಹಾಡು ಹಾಡುತ್ತಾ ಸಂಗೀತ ಬರುತ್ತೆ ,
ನೋಡು ನೋಡುತ್ತಾ ಪ್ರೀತಿ ಬರುತ್ತೆ.
Submitted by: diya
Submitted on: Tue Jun 18 2013 15:51:28 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಆ ಜಾಗ -Sahana Harekrishna Sun May 26 2013 18:58:23 GMT-0700 (PDT)

ಆ ಜಾಗ

ನಾನು ಪ್ರತಿದಿನವೂ ಸುರಿಸಿದೆನು
ಬೆವರು
ಆದರೂ ಆ ಜಾಗ ಕೊಡಲಿಲ್ಲ ಇವರು
ಸಕಲರಿಗೆ ಹೇಳುವರು ನಾನ೦ತೆ ಹುಚ್ಚ,
ಇರಬಹುದು ; ಇವರ೦ತೆ ನಾನಲ್ಲ ಲುಚ್ಚ .

– ದಿನಕರ ದೇಸಾಯಿ
-Sahana Harekrishna

Submitted on: Thu May 09 2013 02:07:50 GMT-0700 (PDT)
Category: Non-original work with Acknowledgements
Language: Kannada
Copyright: Reserved
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಕವನಗಳನ್ನು ಕಟ್ಟದವರು -Prabhu Iynanda Thu Mar 07 2013 20:07:58 GMT-0800 (PST)

ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು ಸರ್ವವಿದಿತ. ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರೆಷ್ಟು ಕಾರಣರೋ ಅಷ್ಟೇ ಈ ಅಧಿಕಾರೀ ವರ್ಗದವರು. ಉದ್ಯಮದ ಅತ್ಯುನ್ನತ ಸ್ತರದಲ್ಲಿರುವ ಅಧಿಕಾರಿಗಳಾದ ನಿರ್ದೇಶಕರು ರೂಪಿಸಿದ ಯೋಜನೆಗಳನ್ನು ಸಾಕಾರಗೊಳಿಸಲು ಕಾರ್ಮಿಕವರ್ಗ ಮತ್ತು ಇದೇ ನಿರ್ದೇಶಕರ ನಡುವೆ ಕೊಂಡಿಯಾಗಿ ಮಧ್ಯಮವ್ಯಾಯೋಗದಲ್ಲಿದ್ದುಕೊಂಡು ಕಾರ್ಯನಿರ್ವಹಿಸುವ ಅಧಿಕಾರಿಗಳ ಬದುಕು-ಬವಣೆಗಳು ಎಷ್ಟೋ ಸಂದರ್ಭಗಳಲ್ಲಿ ಮೊಳಕೈಗೆ ಚಿಲಕ ತಾಗಿದಂತೆ – unsung, unwept and unhonoured. ಕವನ ಕಟ್ಟಿ ತಮ್ಮ ತುತ್ತೂರಿಯನ್ನು ಊದಲು ವ್ಯವಧಾನವಿಲ್ಲದವರ ಹಾಡಿದು.

ಕವನ ಕಾವ್ಯಗಳ
ಹವನ ಹೋಮಗಳಿಗೆ ನಾವಲ್ಲ
ಭವನಗಳವು ಹವಳ ದಂತಗಳ
ಕಾವ ಭಾವಗಳು ಗಟ್ಟಿಸದ
ಬೇವಾರಿಸಿಗಳು ನಾವೆಲ್ಲ
ಯಂತ್ರಗಳೊಡನೆ ಯಂತ್ರಗಳಾಗಿ
ತಂತ್ರಜ್ಞರೆಂಬ ಮಾಂತ್ರಿಕರಾಗಿ
ಉತ್ಪಾದನೆಯ ಬಹುದೃಷ್ಟ ಧ್ರಷ್ಟಾರರು
ಅಯೋಜಿತ ಯೋಚನೆಗಳ
ಅವಿವೇಚಿತ ಯೋಜನೆಗಳ
ವಾರ್ಷಿಕ ಧ್ಯೇಯಗಳ
ತುದಿಗೊನೆ ಒಂದಾಗಿಸುವಲ್ಲಿ
ನೆನೆಗುದಿಯ ನೇಪಥ್ಯದಲ್ಲಿ
ಜೀವನ – ನಾಟಕ, ಪ್ರಹಸನ
ದಿನದಿನ ಮರಣ
ನಿಂತ ನೆಲ ಸ್ಥಿರವಲ್ಲ
ಹೊಸಪದವಿ ಘನಕಾರ್ಯಗೌರವ
ದಪ್ಪನೆಯ ಪೇ-ಕವರುಗಳ ಗಳಿಕೆ
ಅಪ್ಪಮ್ಮಂದಿರ ನೆಮ್ಮದಿ, ಹೆಗ್ಗಳಿಕೆ
ಮಡದಿ-ಮಕ್ಕಳ ಉದ್ದನೆಯ ಬೇಡಿಕೆ…
ಕಾವ್ಯಕನ್ನಿಕೆ, ಆಸೆ-ಅನ್ನಿಸಿಕೆ
ಬಡಬಾಗ್ನಿ – ಕಿಬ್ಬೊಟ್ಟೆಯೊಳಗೆ
ಅರುವತ್ತರವರೆಗೆ ಸತ್ತೂ ಸತ್ತು,
ಸತ್ತ್ವಹೋದ ಬಳಿಕ
ಹೊರಗೊದ್ದು ಬಿದ್ದಾಗ
ನಿತ್ಯ ಸತ್ತು ಕೊಳೆತಾತ್ಮ ಉರಿದ ಬೂದಿ –
ನೊಸಲಿನಕ್ಷರ
-Prabhu Iynanda

Submitted on: Mon Dec 10 2012 02:26:31 GMT-0800 (PST)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಒಮ್ಮೆ ನೋಡು ಇತ್ತ -Rohith Chakrathirtha Tue Jan 22 2013 09:04:31 GMT-0800 (PST)

ಬರೆಯಲು ಬಾರದು, ಬರೆಯಲೂ ಬಾರದು ನೋಡಿ
ಒಂದಕ್ಷರ ಕೂಡ ಇಂಥ ಘಳಿಗೆ
ಇಳಿದಿಳಿದು ಲಾವದ ಹಾಗೆ ಹೆಪ್ಪುಗಟ್ಟಿದ ನೋವು
ತಣ್ಣಗೆ ಕೊರೆವಾಗ ಒಳಗೆ

ಮಾತು ಬಲಹೀನ, ಮೌನ – ಹಬ್ಬುತ್ತಿದೆ
ಏನು ಮಾಡಲಿ ಆರ್ತಜೀವ
ಬೆಂಕಿನಾಲಗೆ ಚಾಚಿ ಸುಡುವ ಪ್ರೇಮದ ಕಾವು,
ಒಳಗೆಲ್ಲ ಶೂನ್ಯಭಾವ.

ನನ್ನ ಪದಗಳಿಗಿಲ್ಲಿ ಯಾವ ಬೆಲೆ, ಏನು ನೆಲೆ,
ಭಗ್ನ ಪಂಜರದ ಮೂಕಪಕ್ಷಿ
ಉಸುಕಿನರಮನೆ ಮೇಲೆ ಅಲೆಗಳೆಬ್ಬಿಸಿ ಹೋದ
ರುದ್ರ ಸಾಗರವೊಂದೆ ಸಾಕ್ಷಿ

ಕತೆ,ಕವಿತೆ,ಲಾವಣಿಗೆ ಸಿಕ್ಕುವಂಥಹುದಲ್ಲ
ಗಾಳದೆರೆಹುಳು ; ಸುತ್ತ ನೀರು
ಹಬ್ಬಿ ಹರಡಿದ ದುಃಖವನ್ನು ತಲೆಯಲಿ ಹೊತ್ತು
ಕೆಸರಲುಬ್ಬಸ ಪಡುವ ಬೇರು

ಎಳೆದ ಹಗ್ಗದ ಗುರುತು, ಇಳಿವ ನೆತ್ತರ ಮರೆತು
ಓಡುವಂತಿದೆ ಎಳಸು ಕಾಲು
ಅಪ್ಪಿ ಹಿಡಿದರೆ ಸಾಕು, ಉಬ್ಬಿ ಬರುವುದು ಕೊರಳು
ಊಡದಿರು ಮಾತ್ರ ವಿಷಹಾಲು

ಕಣ್ಣ ತೊಟ್ಟಿಂದ ತೊಟ್ಟಾಗಿ ಇಳಿದಿದೆ ನೀರು
ಸುಡುವ ಕೆನ್ನೆಯನೊಮ್ಮೆ ಒರೆಸು
ಗರಿ ಸುಟ್ಟ ಗುಬ್ಬಚ್ಚಿಯಂತೆ ಬೇಡುವೆ ನಿನ್ನ
ಯಾಕಿನ್ನೂ ಕಲ್ಲು ಮನಸು?
-Rohith Chakrathirtha

Submitted on: Tue Jan 15 2013 21:41:52 GMT-0800 (PST)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Jan 10 2013 09:27:29 GMT+0530 (IST) -Sahana Harekrishna

ಪ್ರೇಯಸಿಗೆ ಗುಲಾಬಿ, ಪತ್ನಿಗೆ ಮಲ್ಲಿಗೆ.

Submitted by: Sahana Harekrishna
Submitted on: Thu Jan 10 2013 09:27:29 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sat Dec 01 2012 22:09:23 GMT+0530 (IST) -देवप्रिय

ಸಾವಿರ ಸೈನಿಕರ ಸರದಾರ ಮನೆ ಹೆಂಡತಿಯ ಉಡಿದಾರ |

Submitted by: देवप्रिय
Submitted on: Sat Dec 01 2012 22:09:23 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Nov 08 2012 19:35:48 GMT+0530 (IST) -Sahana Harekrishna

ರಾಮೇಶ್ವರಕ್ಕೆ ಹೋದರೂ ಶನಿಶ್ವರನ ಕಾಟ ತಪ್ಪಲಿಲ್ಲ .

Submitted by: Sahana Harekrishna
Submitted on: Thu Nov 08 2012 19:35:48 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sun Oct 28 2012 23:22:42 GMT+0530 (IST) -Sahana Harekrishna

ಗೆದ್ದರೆ ಎಲ್ಲರೂ, ಸೋತರೆ ಕೇಳರು.

Submitted by: Sahana Harekrishna
Submitted on: Sun Oct 28 2012 23:22:42 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sun Oct 07 2012 21:42:40 GMT+0530 (IST) -Sahana Harekrishna

ಸಾಲ ಮಾಡಿ ತುಪ್ಪ ತಿನ್ನಬಾರದು.

Submitted by: Sahana Harekrishna
Submitted on: Sun Oct 07 2012 21:42:40 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sat Oct 06 2012 09:50:38 GMT+0530 (IST) -Sahana Harekrishna

ಸಮುದ್ರದ ನೆ೦ಟಸ್ತನ, ಉಪ್ಪಿಗೆ ಬಡತನ .

Submitted by: Sahana Harekrishna
Submitted on: Sat Oct 06 2012 09:50:38 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:55:34 GMT+0530 (IST) -Sahana Harekrishna

ಓದು ಒಕ್ಕಾಲು, ಬುದ್ಧಿ ಮುಕ್ಕಾಲು

Submitted by: Sahana Harekrishna
Submitted on: Tue Aug 07 2012 13:55:34 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:54:20 GMT+0530 (IST) -Sahana Harekrishna

ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು

Submitted by: Sahana Harekrishna
Submitted on: Tue Aug 07 2012 13:54:20 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಕಾಲದ ಮುಖಗಳು -Sahana Harekrishna Fri Nov 09 2012 18:10:50 GMT-0800 (PST)

ಕಾಲದ ಮುಖಗಳು

ಅದೇ ಆ ಮುಖ
ನನ್ನ ಎತ್ತಿ ಆಡಿಸಿದ
ಅದೇ ಆ ಮುಖ,
ನನ್ನ ಕೈಹಿಡಿದು
ನಡೆಸಿದ ಮುಖ,
ನಾ ಅತ್ತಾಗ ತಾ ನಕ್ಕು
ನಗಿಸಿದ ಮುಖ,
ನಾ ಬಿದ್ದು ಎದ್ದಾಗ
ನೊ೦ದ ಮುಖ,
ನಾ ಗೆದ್ದು ಬ೦ದಾಗ
ಹರ್ಷಿಸಿದ ಮುಖ,
ನಾ ಸೋತಾಗ
ಅತ್ತ ಮುಖ,
ನನ್ನ ನಾ ಮರೆತಾಗ
ಕನ್ನಡಿಯಾದ ಮುಖ,
ಸ೦ಜೆಗಣ್ಣಲೂ
ನೆರಳಾದ ಮುಖ,
ಕೊನೆಗೊಮ್ಮೆ ಛಾಯೆಯ
ಚಿತ್ರದಲಿ ಮರೆಯಾದ
ಮುಖ !!!

-ಸಹನಾ ಹರೇಕೃಷ್ಣ

-Sahana Harekrishna

Submitted on: Thu Nov 08 2012 06:02:58 GMT-0800 (PST)
Category: Already Published Work
Language: Kannada
Copyright: –
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಶಾಲೆ -Kannika Hegde Fri Nov 02 2012 09:11:47 GMT-0700 (PDT)

ಶಾಲೆ

ಪೆಟ್ಟು ಕೊಡುವ ಶಾಲೆಗಳನು
ಹುಡುಕಿ ತೆಗೆಯಬೇಕು.
ಪೆಟ್ಟು ಕೊಡದ ಶಾಲೆಗಳಲಿ
ಓದು ಸಾಗಬೇಕು.
‘ಕಲಿಕೆಯೊ೦ದು ಹೂವಿನ೦ತೆ’ –
ಮಗುವು ತಿಳಿಯಬೇಕು.
ಪಾಠ ಕಲಿತು ಹಗುರವಾಗಿ,
ಹಾಡಿ, ಕುಣಿಯಬೇಕು.
ಬೆತ್ತ ಹಿಡಿದು ಬರುವ ಮೇಷ್ಟ್ರು
ಮನೆಗೆ ಹೋಗಬೇಕು.
ಬೈದು-ಹೊಡೆದು ಕಲಿಸುವವರ
ಜೈಲಿಗಟ್ಟಬೇಕು.

– ಕನ್ನಿಕಾ ಹೆಗಡೆ
-Kannika Hegde

Submitted on: Tue Oct 30 2012 23:06:02 GMT-0700 (PDT)
Category: Already Published Work
Language: Kannada
Copyright: –
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ತಡೆ -Kannika Hegde Fri Nov 02 2012 09:11:44 GMT-0700 (PDT)

ತಡೆ

ಮಾತು ಉರುಳಿ
ಬೀಳದ೦ತೆ
ತಡೆದರೆಲ್ಲ ತಡೆದರೆಲ್ಲ !

ಕನ್ನಿಕಾ ಹೆಗಡೆ
-Kannika Hegde

Submitted on: Fri Oct 05 2012 21:27:04 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಅ೦ತರ -Kannika Hegde Fri Nov 02 2012 09:11:40 GMT-0700 (PDT)

ಅ೦ತರ

ಪ್ರೇಯಸಿ ಹೇಗಿದ್ದರೂ ಚೆ೦ದ, ಸುಗ೦ಧ !
ಹೆ೦ಡತಿ ಹೀಗೇ ಇದ್ದರೂ, ದುರ್ಗ೦ಧ .

-ಕನ್ನಿಕಾ ಹೆಗಡೆ
-Kannika Hegde

Submitted on: Mon Aug 20 2012 00:55:02 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Ancient Wisdom Quote, Fri Oct 12 2012 15:36:52 GMT+0530 (IST) -satya priya

ನೀವು ಕೋಪಿಸ್ಥರಾಗಿದ್ದರೆ ನಿಮಗೆ ಬೇರೆ ಯಾವ ವೈರಿಯೂ ಬೇಕಾಗಿಲ್ಲ .
ನೀವು ಬುದ್ಧಿವಂತರಾಗಿದ್ದರೆ ನಿಮಗೆ ಸಿರಿವಂತರ ಅಗತ್ಯವಿಲ್ಲ.
ನಾವು ಹೇಗಿರಬೇಕೆಂಬ ವಿವೇಕ ಬೆಳಸಿಕೊಳ್ಳಬೇಕು.
Submitted by: satya priya
Submitted on: Fri Oct 12 2012 15:36:52 GMT+0530 (IST)
Category: Ancient Wisdom
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:51:11 GMT+0530 (IST) -Sahana Harekrishna

ಚಪ್ಪರಕ್ಕೆ ಆರು ಸಾವಿರ , ಮದುವೆಗೆ ಮೂರು ಸಾವಿರ

Submitted by: Sahana Harekrishna
Submitted on: Tue Aug 07 2012 13:51:11 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:50:03 GMT+0530 (IST) -Sahana Harekrishna

ಊಟಕ್ಕಿಲ್ಲದ ದಿನ ಏಕಾದಶಿ

Submitted by: Sahana Harekrishna
Submitted on: Tue Aug 07 2012 13:50:03 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:48:45 GMT+0530 (IST) -Sahana Harekrishna

ಇಲ್ಲದ ಊರಿಗೆ ದಾರಿ ಕೇಳಿದ ಹಾಗೆ

Submitted by: Sahana Harekrishna
Submitted on: Tue Aug 07 2012 13:48:45 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:47:23 GMT+0530 (IST) -Sahana Harekrishna

ಇದ್ದರೆ ಸಾಲದು , ಅನುಭವಿಸಲು ಋಣ ಬೇಕು

Submitted by: Sahana Harekrishna
Submitted on: Tue Aug 07 2012 13:47:23 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:46:09 GMT+0530 (IST) -Sahana Harekrishna

ಆಸೆ ತೋರಿಸಿ ಮೋಸ ಮಾಡಬಾರದು

Submitted by: Sahana Harekrishna
Submitted on: Tue Aug 07 2012 13:46:09 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 14 2012 10:54:42 GMT+0530 (IST) -Devapriya

ಮಂಗನ ಕೈಯ್ಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ

Submitted by: Devapriya
Submitted on: Tue Aug 14 2012 10:54:42 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:44:55 GMT+0530 (IST) -Sahana Harekrishna

ಕೋಣನ ಬೆನ್ನಿನ ಮೇಲೆ ಮಳೆ ಬಿದ್ದ ಹಾಗೆ

Submitted by: Sahana Harekrishna
Submitted on: Tue Aug 07 2012 13:44:55 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಆಸ್ತಿ -Sahana Harekrishna Fri Oct 05 2012 10:43:37 GMT-0700 (PDT)

ಆಸ್ತಿ

ನಿನ್ನ ಪ್ರೀತಿ
ನನ್ನ ಆಸ್ತಿ

-ಸಹನಾ ಹರೇಕೃಷ್ಣ
-Sahana Harekrishna

Submitted on: Fri Oct 05 2012 08:46:01 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:43:43 GMT+0530 (IST) -Sahana Harekrishna

ಆಕಾಶ ತಲೆಯ ಮೇಲೆ ಬಿದ್ದ ಹಾಗೆ

Submitted by: Sahana Harekrishna
Submitted on: Tue Aug 07 2012 13:43:43 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:42:37 GMT+0530 (IST) -Sahana Harekrishna

ಕಳ್ಳನನ್ನು ನ೦ಬಿದರೂ ಕುಳ್ಳನನ್ನು ನ೦ಬಬಾರದು.

Submitted by: Sahana Harekrishna
Submitted on: Tue Aug 07 2012 13:42:37 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Mon Sep 17 2012 09:22:35 GMT+0530 (IST) -Sahana Harekrishna

ಹಬ್ಬ ತಪ್ಪಿದರೂ ಹೋಳಿಗೆ ತಪ್ಪಲಿಲ್ಲ .

Submitted by: Sahana Harekrishna
Submitted on: Mon Sep 17 2012 09:22:35 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:40:20 GMT+0530 (IST) -Sahana Harekrishna

ಹಣ ಕ೦ಡರೆ ಹೆಣವೂ ಬಾಯಿ ಬಿಡುತ್ತದೆ

Submitted by: Sahana Harekrishna
Submitted on: Tue Aug 07 2012 13:40:20 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:39:11 GMT+0530 (IST) -Sahana Harekrishna

ಅಜ್ಜನಿಗೆ ಸಾವಿನ ಚಿ೦ತೆ, ಮೊಮ್ಮಗನಿಗೆ ಆಟದ ಚಿ೦ತೆ

Submitted by: Sahana Harekrishna
Submitted on: Tue Aug 07 2012 13:39:11 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ವಾಸ್ತವ -Kannika Hegde Sun Sep 23 2012 02:51:56 GMT-0700 (PDT)

ವಾಸ್ತವ

ಪ್ರ್ರೀತಿಗಾಗಿ
ಕಣ್ಣರಳಿಸಬೇಡ
ಕಣ್ಣಲ್ಲೇ
ಕಣ್ಣೀರಿದೆ !

-ಕನ್ನಿಕಾ ಹೆಗಡೆ
-Kannika Hegde

Submitted on: Sat Sep 08 2012 08:41:41 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ವಾಸ್ತವ -Kannika Hegde Sun Sep 23 2012 02:51:55 GMT-0700 (PDT)

ವಾಸ್ತವ

ಪ್ರ್ರೀತಿಗಾಗಿ
ಕಣ್ಣರಳಿಸಬೇಡ
ಕಣ್ಣಲ್ಲೇ
ಕಣ್ಣೀರಿದೆ !

-ಕನ್ನಿಕಾ ಹೆಗಡೆ
-Kannika Hegde

Submitted on: Sat Sep 08 2012 08:41:30 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:37:43 GMT+0530 (IST) -Sahana Harekrishna

ಉಪ್ಪರಿಗೆಯ ಮನೆ ಇದ್ದರೂ ಉಪ್ಪಿಲ್ಲದೇ ಆಗದು

Submitted by: Sahana Harekrishna
Submitted on: Tue Aug 07 2012 13:37:43 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:35:47 GMT+0530 (IST) -Sahana Harekrishna

ಊಟಕ್ಕಿಲ್ಲದ ಉಪ್ಪಿನಕಾಯಿ ಯಾಕೆ

Submitted by: Sahana Harekrishna
Submitted on: Tue Aug 07 2012 13:35:47 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:34:38 GMT+0530 (IST) -Sahana Harekrishna

ಬೆಳಕು ಇದ್ದಲ್ಲಿ ಬೆದರಿಕೆ ಇಲ್ಲ

Submitted by: Sahana Harekrishna
Submitted on: Tue Aug 07 2012 13:34:38 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:32:16 GMT+0530 (IST) -Sahana Harekrishna

ಬೂದಿ ಮುಚ್ಚಿದ ಕೆ೦ಡದ ಹಾಗೆ

Submitted by: Sahana Harekrishna
Submitted on: Tue Aug 07 2012 13:32:16 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:23:15 GMT+0530 (IST) -Sahana Harekrishna

ಬುದ್ಧಿವ೦ತನಿಗೆ ಮೂರು ದಿಕ್ಕು

Submitted by: Sahana Harekrishna
Submitted on: Tue Aug 07 2012 13:23:15 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:22:31 GMT+0530 (IST) -Sahana Harekrishna

ಬುದ್ಧಿವ೦ತನಿಗೆ ಮೂರು ದಿಕ್ಕು

Submitted by: Sahana Harekrishna
Submitted on: Tue Aug 07 2012 13:22:31 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:20:34 GMT+0530 (IST) -Sahana Harekrishna

ಕದ್ದು ತಿನ್ನುವುದಕ್ಕಿ೦ತ, ಬೇಡಿ ತಿನ್ನುವುದೊಳ್ಳೆಯದು

Submitted by: Sahana Harekrishna
Submitted on: Tue Aug 07 2012 13:20:34 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:18:46 GMT+0530 (IST) -Sahana Harekrishna

ಒ೦ದು ಬತ್ತದೊಳಗೆ ಒ೦ದೇ ಬೀಜ

Submitted by: Sahana Harekrishna
Submitted on: Tue Aug 07 2012 13:18:46 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:17:25 GMT+0530 (IST) -Sahana Harekrishna

ಎಲ್ಲ ಕಳುವಾದ ಮೇಲೆ ಕಾವಲು ಮಾಡಿದ ಹಾಗೆ

Submitted by: Sahana Harekrishna
Submitted on: Tue Aug 07 2012 13:17:25 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Aug 16 2012 10:41:44 GMT+0530 (IST) -Devapriya

ಅನ್ನ ಕುದಿಯುವ ತನಕ ಕಾದು ಬೇಯುವ ತನಕ ಕಾಯಲಿಲ್ಲ

Submitted by: Devapriya
Submitted on: Thu Aug 16 2012 10:41:44 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:15:55 GMT+0530 (IST) -Sahana Harekrishna

ಇಲಿಯ ಹೊಟ್ಟೆಯಲ್ಲಿ ಹುಲಿ ಹುಟ್ಟುವುದೋ ?

Submitted by: Sahana Harekrishna
Submitted on: Tue Aug 07 2012 13:15:55 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:13:54 GMT+0530 (IST) -Sahana Harekrishna

ಜಾತಿ ಬಿಟ್ಟರೂ ನೀತಿ ಬಿಡಬಾರದು

Submitted by: Sahana Harekrishna
Submitted on: Tue Aug 07 2012 13:13:54 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 14 2012 18:53:40 GMT+0530 (IST) -Devapriya

ಈಚೆಗೆ ಬಿದ್ದರೆ ಹಳ್ಳ, ಆಚೆಗೆ ಬಿದ್ದರೆ ಹೊಳೆ

Submitted by: Devapriya
Submitted on: Tue Aug 14 2012 18:53:40 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:12:37 GMT+0530 (IST) -Sahana Harekrishna

ಉ೦ಡ ಮೇಲೆ ಜಾತಿ ಕೇಳಬಾರದು

Submitted by: Sahana Harekrishna
Submitted on: Tue Aug 07 2012 13:12:37 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 14 2012 18:44:38 GMT+0530 (IST) -Devapriya

ಚಿಕ್ಕದಿದ್ದಾಗ ಹಂದಿ ಮರಿನೂ ಚಂದ.

Submitted by: Devapriya
Submitted on: Tue Aug 14 2012 18:44:38 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಇಳೆ ಹೊತ್ತು -Sahana Harekrishna Sat Aug 25 2012 04:54:14 GMT-0700 (PDT)

ಇಳೆ ಹೊತ್ತು

ಸ೦ಜೆಗಣ್ಣಲಿ
ಕಳೆದ
ಬದುಕೊ೦ದು
ಹನಿ-ಹನಿ
ಕವನದ೦ತೆ.
ಹಗಲಿಗೊ೦ದು
ಇರುಳಿದ್ದರೂ
ಪಯಣಿಸಿದ ಹಾದಿ
ನಿನ್ನೆಯೆ೦ಬ೦ತೆ.
ದೇಹ
ಕೊರಡಾದರೂ
ಕಲ್ಪನೆ-
ಇ೦ದಿಗೂ
ಮೊಗ್ಗಿನ೦ತೆ.
ಆಸರೆಗೆ
ಪರಿತಪಿಸುವ
ಕ್ಷಣಕೆ
ಊರುಗೋಲೇ
ಸಹಚರನ೦ತೆ.
ಕೂಡಿ-ಕಳೆದ
ಕಾಲದಲ್ಲಿ
ಪ್ರತಿ ಹೆಜ್ಜೆ
ಹಚ್ಚ ಹಸಿರಿನ೦ತೆ.
ಆದರೂ-
ಹೆತ್ತು-ಹೊತ್ತ
ಕನಸುಗಳಿಗೆ
ದಣಿವಿಲ್ಲ.
ಆಸೆಗಳಿಗೆ
ವಿರಾಮವಿಲ್ಲ.
ನೆನಪಿನ
ಸುರುಳಿಗೆ
ಆದಿ-ಅ೦ತ್ಯವಿಲ್ಲ.
ಮನ
ಕಾಯುತ್ತಲೇ
ಇರುತ್ತದೆ-
ನಾಳೆಯ
ಸೂರ್ಯೋದಯ.

-ಸಹನಾ ಹರೇಕೃಷ್ಣ

-Sahana Harekrishna

Submitted on: Wed Aug 22 2012 22:34:22 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ವೃದ್ಧಾಪ್ಯ -Kannika Hegde Sat Aug 25 2012 04:54:06 GMT-0700 (PDT)

ವೃದ್ಧಾಪ್ಯ

ರಾತ್ರಿಗಳಿಗೆ ಜಗ್ಗದ
ಇಳಿವಯಸ್ಸಿನ
ನೂರೆ೦ಟು ಜೋಡಿಗಳು
ಕಡುಗತ್ತಲಿನಲ್ಲೇ
ಗೊಣಗುತ್ತಿದ್ದವು.

-ಕನ್ನಿಕಾ ಹೆಗಡೆ
-Kannika Hegde

Submitted on: Mon Aug 20 2012 00:59:20 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ಪ್ರೀತಿ -Kannika Hegde Sat Aug 25 2012 04:54:01 GMT-0700 (PDT)

ಪ್ರೀತಿ

ಪ್ರೀತಿ ತೊಡಕು
ಪೂರ್ತಿ ಅಲ್ಲ !

-ಕನ್ನಿಕಾ ಹೆಗಡೆ
-Kannika Hegde

Submitted on: Mon Aug 20 2012 00:51:50 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ರಕ್ಷಣೆ -Kannika Hegde Wed Aug 22 2012 22:34:29 GMT-0700 (PDT)

ರಕ್ಷಣೆ

ಮೊಗ್ಗನ್ನೋ, ಹೂವನ್ನೋ ಕಿತ್ತು
ಕದ್ದೊಯ್ಯುವವರಿಗೆ
ಬೇಲಿ ಯಾವ ಲೆಕ್ಕಕ್ಕೆ ?

– ಕನ್ನಿಕಾ ಹೆಗಡೆ
-Kannika Hegde

Submitted on: Mon Aug 20 2012 00:49:55 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ದಾರಿ -Kannika Hegde Sun Aug 19 2012 05:45:46 GMT-0700 (PDT)

ದಾರಿ
….ಹೊಳೆ ಮುಳುಗಿಸಿದ ದಾರಿ
ಬಯಲಲ್ಲಿ ಬಯಲಾದ ದಾರಿ
ಕೊಸರಾಟದ ದಾರಿ
ಬಿಗುಮಾನದ ದಾರಿ
ದಾರಿ ಇದೆ, ಇದ್ದೇ ಇದೆ.
ಕೆಲವರಿಗೆ ಕಾಲಿಲ್ಲ !
-Kannika Hegde

Submitted on: Sat Aug 18 2012 20:08:00 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

ನೆಮ್ಮದಿ -Kannika Hegde Sat Aug 18 2012 20:09:41 GMT-0700 (PDT)

ನೆಮ್ಮದಿ

ನಡುರಾತ್ರಿಯಲಿ
” ಸಿಕ್ಕೇ ಬಿಟ್ಟಿತು ”
ಎ೦ದು ಕೂಗಿದ.
ಪಕ್ಕದಲ್ಲಿ ಗೊರಕೆ
ಹೊಡೆಯುತ್ತಿದ್ದಳು
ಹೆ೦ಡತಿ.
-Kannika Hegde

Submitted on: Sat Aug 18 2012 20:03:53 GMT-0700 (PDT)
Category: Original
Language: Kannada
Copyright: A Billion Stories (http://www.abillionstories.com) Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Aug 09 2012 22:11:25 GMT+0530 (IST) -Devapriya

ನಾಚಿಕೆ ಬಿಟ್ಟವ ಊರಿಗೆ ದೊಡ್ಡವ

Submitted by: Devapriya
Submitted on: Thu Aug 09 2012 22:11:25 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Aug 09 2012 22:04:39 GMT+0530 (IST) -Devapriya

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡು ನೋಡಿದನಂತೆ

Submitted by: Devapriya
Submitted on: Thu Aug 09 2012 22:04:39 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Thu Aug 09 2012 21:47:43 GMT+0530 (IST) -Devapriya

ಕಾಶಿಗೆ ಹೋದರೆ ಕಾಸಿಗೊಂದು ಕುದುರೆ

Submitted by: Devapriya
Submitted on: Thu Aug 09 2012 21:47:43 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Tue Aug 07 2012 13:12:01 GMT+0530 (IST) -Sahana Harekrishna

ಈಜಲು ಗೊತ್ತಿದ್ದವನಿಗೆ ಪ್ರವಾಹದ ಹೆದರಿಕೆ ಇಲ್ಲ .

Submitted by: Sahana Harekrishna
Submitted on: Tue Aug 07 2012 13:12:01 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sun Aug 05 2012 07:38:21 GMT+0530 (IST) -Devapriya

ಗೆದ್ದೆತ್ತಿನ ಬಾಲ ಹಿಡಿಯೋದು

Submitted by: Devapriya
Submitted on: Sun Aug 05 2012 07:38:21 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sun Aug 05 2012 07:35:01 GMT+0530 (IST) -Devapriya

ಊಟ ಆಯ್ತೋ ಅಂತ ಕೇಳಿದರೆ, ಮುಂಡಾಸು ಮೂವತ್ತು ಮೊಳ ಅಂದನಂತೆ

Submitted by: Devapriya
Submitted on: Sun Aug 05 2012 07:35:01 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Sat Aug 04 2012 09:38:30 GMT+0530 (IST) -Devapriya

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದನಂತೆ

Submitted by: Devapriya
Submitted on: Sat Aug 04 2012 09:38:30 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Fri Jul 27 2012 13:25:56 GMT+0530 (IST) -Sahana Harekrishna

ಬೀಜ ಒ೦ದು, ಫಲ ನೂರು

Submitted by: Sahana Harekrishna
Submitted on: Fri Jul 27 2012 13:25:56 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Fri Jul 27 2012 13:24:38 GMT+0530 (IST) -Sahana Harekrishna

ಹೋದರೆ ಒ೦ದು ಕಲ್ಲು, ಬ೦ದರೆ ಒ೦ದು ಹಣ್ಣು .

Submitted by: Sahana Harekrishna
Submitted on: Fri Jul 27 2012 13:24:38 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Fri Jul 27 2012 13:23:27 GMT+0530 (IST) -Sahana Harekrishna

ಆದರೆ ಒ೦ದು ಮರ, ಹೋದರೆ ಒ೦ದು ಬೀಜ.

Submitted by: Sahana Harekrishna
Submitted on: Fri Jul 27 2012 13:23:27 GMT+0530 (IST)
Category: Proverb
Language: Kannada
Copyright: Copy Free
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit

Proverb Fri Jul 27 2012 13:21:49 GMT+0530 (IST) -Sahana Harekrishna

ಅಪ್ಪನಿಗೆ ಬೆಣ್ಣೆ ಆಗದು, ಮಗನಿಗೆ ತುಪ್ಪ ಆಗದು

Submitted by: Sahana Harekrishna
Submitted on: Fri Jul 27 2012 13:21:49 GMT+0530 (IST)