ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು
ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು.

ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು
ಒಂದರಂತೆ ಇನ್ನೊಂದು… ಮತ್ತೊಂದು … ಕಾಲ ಬಳಿ ಋತುಗಳ ರಾಶಿ.

ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು ಬೂದಿಯಾಗುತ್ತ
ಒಳಗೆ ಕಾಮಾಲೆ ಕಣ್ಣೊರೆಸುತ್ತ… ನಿಂತ ನೀರು ನಿಂತಲ್ಲಿಯೇ .

ಕೈಗಳು ತೂಗುತಿವೆ ಬರಿದಾದ ತೊಟ್ಟಿಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು.
ಮನಸು ಮರ್ಕಟ … ಅಂತರಂಗ- ಸಂತೆ ಪೇಟೆಯ ಗೋಜಲು.

ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ.
ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .

ಅರ್ಧ ಬೆಳಗುವ ಚಂದ್ರ … ಅರ್ಧ ಮಿಣುಕುವ ತಾರೆ
ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .

-Daya Bhat

Photo By:
Submitted by: Daya Bhat
Submitted on: Tue May 02 2017 09:48:53 GMT+0530 (IST)
Category: Original
Language: ಕನ್ನಡ/Kannada

– Read submissions at http://readit.abillionstories.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit