ಕಳೆಯೂತಿರಲು ದಿನಗಳು,
ನೆಮ್ಮದಿಯ ಹುಡುಕಾಟದಲ್ಲಿ.
ಸಿಗುವುದೇ ಸಂತೋಷ, ಸುಖ ಶಾಂತಿ
ನಮ್ಮ ಮತ್ತು ನಮ್ಮವರ ಬದುಕಿನಲ್ಲಿ,
ಯಾವರೀತಿ ಬದುಕಬೇಕೆಂದು
ಯಾರು ಹೇಳಿಕೊಡರಿಲ್ಲಿ
ಅದನ್ನು ಕಲಿಯಬೇಕು ನಾವಿಲ್ಲಿ..
ಗೆಳೆಯ ಹೇಳಿದ ಚುಟುಕು ನೆನಪಾಯಿತು ನನಗಿಲ್ಲಿ ,
ಜೀವನವೇ ಒಂದು ಆಟ
ಸೋಲು ಗೆಲುವಿನ ಕಾದಾಟ
ಪ್ರೀತಿ ವಿಶ್ವಾಸಗಳ ಹುಡುಕಾಟ
ಬಂಧ ಸಂಬಂಧಗಳ ತೊಳಲಾಟ
ಆಸೆ ಆಕಾಂಕ್ಷೆಗಳ ಗೋಳಾಟ
ಮೂರು ಗೆರೆಗಳ ಹಣೆಬರಹದ ನಾಟಕ.
ಹಾಗೆ, ಆಡಬೇಕು ಪ್ರತಿಯೊಬ್ಬನಿಲ್ಲಿ…
ಬದುಕಲೂ ಗೆಲ್ಲಲೆ ಬೇಕು ನೀನಿಲ್ಲಿ…
ಗೆಲ್ಲಲೆ ಬೇಕು ನೀನಿಲ್ಲಿ…!
Shri.Ginde

Photo By:
Submitted by: Shri.Ginde
Submitted on: Mon Jun 27 2016 14:12:19 GMT+0530 (IST)
Category: Original
Language: ಕನ್ನಡ/Kannada

– Read submissions at https://abillionstories.wordpress.com
– Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit